18 ರಂದು ಭಾವೈಕ್ಯತಾ ಕವಿಗೋಷ್ಠಿ
ತುಮಕೂರು: ರಾಜ್ಯ ಉರ್ದು ಅಕಾಡೆಮಿ ಬೆಂಗಳೂರು, ಗುಲಿಸ್ತಾನ್-ಎ-ಉರ್ದು ಅದಬ್ ಹಾಗೂ ಭಾರತೀಯ ಜನಕಲಾ ಸಮಿತಿ (ಇಪ್ಟಾ) ಸಂಯುಕ್ತಾಶ್ರಮಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಕವಿಗೋಷ್ಠಿ ಆ.18 ರಂದು ಬೆಳಗ್ಗೆ 10 ಗಂಟೆಗೆ ತುಮಕೂರಿನ ಜಿಪಂ ಸಭಾಂಗಣದಲ್ಲಿ ಏರ್ಪಾಟಾಗಿದೆ.
ಅಲ್ಸಸಂಖ್ಯಾತರ ಕಲ್ಯಾಣ, ಹಜ್, ವಕ್ಪ್ ಹಾಗೂ ಪೌರಾಡಳಿತ ಖಾತೆ ಸಚಿವ ಖಮರುಲ್ ಇಸ್ಲಾಂ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಜಿಪಂ ಸಿಇಓ ಗೋವಿಂದರಾಜು, ಮೈಸೂರಿನ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಸುಚೇತನ ಸ್ವರೂಪ್, ಕವಿ ಕೆ.ಬಿ. ಸಿದ್ದಯ್ಯ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ವಹಿಸಲಿದ್ದಾರೆ.
ಬಾ.ಹ. ರಮಾಕುಮಾರಿ, ಆಯಿಷಾ ಚಾಂದ್ ಮೈಸೂರ್, ಪತ್ರಕರ್ತ ಜಿ. ಇಂದ್ರಕುಮಾರ್, ಕೆ.ಪಿ. ನಟರಾಜ್, ಶಹನವಾಜ್ ಬಾನು ಶಾಹಿನ್, ವಿಜಯಾ ಮೋಹನ್, ಆರೀಫ್ ಮತೀನ್, ಡಾ. ಸೋ.ಮು. ಭಾಸ್ಕರಾಚಾರ್, ಮುನೀರ್ ಅಹಮದ್, ಶಾಂತಾ ಕಂಪಾರಳ್ಳಿ, ಅಬ್ಬಿನಹೊಳೆ ಸುರೇಶ್, ಡಾ. ಶೌಕತ್ ಅಲಿ ಶಾಹಿದ್, ಗಂಗಾಧರ ಕೊಡ್ಲಿಯವರ್, ಮುಷ್ತಾಕ್ ಸಯೀದ್ ಇತರರು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.