ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಟ್ರಸ್ಟನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

Rashmi Kasaragodu
Updated On : 15 Aug 2013, 12:39 pm

ಶಿರಾ:  ಪಟ್ಟಣದ ಸಂತೇಪೆಟೆಯ ಶ್ರೀ ಕೊಳದಪ್ಪಲೇಶ್ವರ ಸ್ವಾಮಿ ದೇವಸ್ಥಾನದ ಹೆಸರಲ್ಲಿ ಟ್ರಸ್ಟ್ ಒಂದನ್ನು ಮಾಡಿಕೊಂಡು ಒಂದು ಕೋಮಿನ ಕೆಲವೇ ಸೀಮಿತ ವ್ಯಕ್ತಿಗಳು ದೇವರ ಹೆಸರಲ್ಲಿ ಜನಾಂಗದ ಪ್ರಮುಖರು ರಾಜಕಾರಣಿಗಳಿಂದ ಹಣ ವಸೂಲಿ ಮಾಡುತ್ತಿದ್ದು ಈ ಕೂಡಲೇ ಸದರಿ ಟ್ರಸ್ಟನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಗರ ಸಂತೇಪೇಟೆಯ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  ತಾಲೂಕು ದಂಡಾಧಿಕಾರಿ ಕುಲಕರ್ಣಿ ಅವರಿಗೆ ಸದರಿ ದೇವಸ್ಥಾನದ ವಿಷಯಕ್ಕೆ ಸಂಬಂಧಪಟ್ಟಂತೆ ಸಂತೇಪೇಟೆಯ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ನಗರಸಭಾ ಸದಸ್ಯರಾದ ಎಸ್.ಜೆ.ರಾಜಣ್ಣ, ನಟರಾಜು, ಜ್‌ಞಾನಪೂರ್ಣ, ಮಲ್ಲೇಶಪ್ಪ, ಚಿಕ್ಕನಂಜಪ್ಪ, ಮಂಜುನಾಥಗೌಡ, ಯೋಗೀಶ್ ಬಾಬು, ರಾಘವೇಂದ್ರ, ಪಡಿರಮೇಶ್, ಲೋಕೇಶ್ ಮತ್ತಿತರರು ಹಾಜರಿದ್ದರು.



17 ರಂದು ಹಿರಿಯ ನಾಗರಿಕರ ಪ್ರತಿಭಟನೆ
ತುಮಕೂರು:  ಆ.17 ರಂದು ವಿವಿಧ  ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಿರಿಯ ನಾಗರಿಕರ ವೇದಿಕೆ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.  ತುಮಕೂರು ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ಶ್ರೇಯೋಭಿವೃದ್ಧಿ ಸಂಘ, ಹಿರಿಯ ನಾಗರಿಕರ ವೇದಿಕೆ ಸಹಯೋಗದಲ್ಲಿ ಪ್ರತಿಭಟನೆ ನಡೆಯಲಿದೆ. ಅಂದು  ಬೆಳಗ್ಗೆ 60 ವರ್ಷ ವಯಸ್ಸಾದವರು, ವೃದ್ಧಾಪ್ಯ ವೇತನ ಪಡೆಯುತ್ತಿರುವವರು ಜಿಲ್ಲಾ ನಿವೃತ್ತ ನೌಕರರ ಸಂಘದ ಆವರಣದಲ್ಲಿ (ಜಿಲ್ಲಾಧಿಕಾರಿ ಕಚೇರಿ ಹಿಂಭಾಗ) ಸೇರಿ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.  ಬೋಬಡೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಾಲೂರಪ್ಪ ತಿಳಿಸಿದ್ದಾರೆ.
ಶ್ರೀ ಪದ್ಧತಿ ಬತ್ತ ಬೇಸಾಯ ಕಾರ್ಯಕ್ರಮ
ತಿಪಟೂರು: ತಾಲೂಕಿನ ರಂಗಾಪುರ ವಲಯದ ಹೊಗವನಘಟ್ಟ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೈತರಿಗೆ ಶ್ರೀರೈತ ಪದ್ಧತಿಯ ಮೂಲಕ ಬತ್ತದ ಬೇಸಾಯ ಕ್ರಮವನ್ನು ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಕ್ರಮ ನಡೆಸಲಾಯಿತು.  ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಗಂಗಾಧರಯ್ಯ ವಹಿಸಿದ್ದರು. ವಲಯ ಮೇಲ್ವಿಚಾರಕ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷಿ ಮೇಲ್ವಿಚಾರಕಿ ನಂದಿತಾ ಶ್ರೀ ಪದ್ಧತಿಯ ಬಗ್ಗೆ ಮಾಹಿತಿಯನ್ನು ನೀಡಿ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿಯನ್ನು ಪಡೆಯುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.  ನಂತರ ಸದಸ್ಯರು ಶ್ರೀ ಪದ್ಧತಿಯ ಅನ್ವಯ ಬತ್ತದ ಸಸಿಗಳನ್ನು ನಾಟಿ ಮಾಡಿದರು.
ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ
ತಿಪಟೂರು: ಪೌರಸೇವಾ ನೌಕರರ ಸಂಘ ಮತ್ತು ನಗರಸಭೆ ತಿಪಟೂರು ಶಾಖೆಗೆ ನೂತನ ಅಧ್ಯಕ್ಷರಾಗಿ ಎಂ.ಪರಶುರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿ.ರಾಜಣ್ಣ ಆಯ್ಕೆಯಾಗಿದ್ದಾರೆ.
ನಾಪತ್ತೆ
ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿ ಮಮಚೇಹಳ್ಳಿ ವಾಸಿ ಸಿದ್ದಮ್ಮ (65) ಎಂಬವರು ಜು.28ರಂದು  ಕಾಣೆಯಾಗಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಸುಳಿವು ಸಿಕ್ಕಲ್ಲಿ ಈ ಕೆಳಕಂಡ ದೂ 08136-132136ಗೆ ತಿಳಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement