ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅತ್ಯಾಚಾರಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಸನ್ಮಾನ:ಭಗತ್ ಕ್ರಾಂತಿ ಸೇನೆ ತೀವ್ರ ಆಕ್ಷೇಪ

Rashmi Kasaragodu
Updated On : 16 Aug 2013, 1:30 am

ಕುಣಿಗಲ್:  ಅತ್ಯಾಚಾರಿಗೆ ತಾಲೂಕು ಆಡಳಿತ ಸನ್ಮಾನಿಸಲು ಮುಂದಾದಾಗ, ಭಗತ್ ಕ್ರಾಂತಿ ಸೇನೆಯ ಪದಾಧಿಕಾರಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತಹಸೀಲ್ದಾರ್ ಮತ್ತು ಶಾಸಕರೊಂದಿಗೆ ವಾಗ್ವಾದ ನಡೆಸಿದ ಘಟನೆ ಸ್ವಾತಂತ್ರ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ನಡೆಯಿತು.
ಗುರುವಾರ, ಸ್ವಾತಂತ್ರ್ಯೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ತಾಲೂಕು ಆಡಳಿತದ ವತಿಯಿಂದ ಸನ್ಮಾನ ನೆರವೇರಿಸಲಾಗುತಿತ್ತು, ಈ ಸಂಧರ್ಭದಲ್ಲಿ ವೇದಿಕೆಯ ಮೇಲಿದ್ದ ನಿವೃತ್ತ ನೌಕರರ ಒತ್ತಾಯದ ಮೇರೆಗೆ ತಾಲೂಕು ಆಡಳಿತ ನಿವೃತ್ತ ಸೈನಿಕ ಕರೀಗೌಡ ಎಂಬಾತನನ್ನು ಸಾಮಾಜಿಕ ಸೇವೆಗೆ ಎಂದು ಗುರುತಿಸಿ ಸನ್ಮಾನಿಸಲು ವೇದಿಕೆ ಆಹ್ವಾನಿಸಿದರು. ಸ್ಥಳದಲ್ಲಿದ್ದ ಭಗತ್ ಕ್ರಾಂತಿ ಸೇನೆಯ ಮಂಜುನಾಥ್, ವೇದಿಕೆ ಏರಿ ಸದರಿ ಸನ್ಮಾನಿತರು, ಈಗಾಗಲೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ  ಸಮಗ್ರ ವಿಚಾರಣೆ ನಡೆದು ಆರೋಪ ಸಾಬೀತಾದ ಕಾರಣ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದಾರೆ. ಇಂತಹವರಿಗೆ ಪೂರ್ವಾಪರ ವಿಚಾರಿಸದೆ ಸನ್ಮಾನಕ್ಕೆ ಪರಿಗಣಿಸಿರುವುದು ಸರಿಯಲ್ಲ, ಅಲ್ಲದೆ ಇದು ಇಡೀ ತಾಲೂಕು ಆಡಳಿತದ ಗೌರವದ ಪ್ರಶ್ನೆ. ತಾಲೂಕು ಆಡಳಿತ ಸನ್ಮಾನದ ಘನತೆ, ಗೌರವ ಕಾಪಾಡುವಂತೆ ಆಗ್ರಹಿಸಿದರು.
ಇದಕ್ಕೆ ತಹಸೀಲ್ದಾರ್ ಜಗದೀಶ್, ವೇದಿಕೆಗೆ ಕರೆಯಲಾಗಿದೆ, ಏನು ಮಾಡಲಾಗದು ಎಂದರು. ಈ ವಿಷಯ ಶಾಸಕ ಡಿ.ನಾಗರಾಜಯ್ಯ ಗಮನಕ್ಕೆ ತಂದ ಹಿನ್ನೆಲೆ ಶಾಸಕರು ಈಗಾಗಲೆ ಸನ್ಮಾನಕ್ಕೆ ಪರಿಗಣಿಸಿದ್ದು, ವೇದಿಕೆಯಲ್ಲಿ ವಿನಾಕಾರಣ ಪ್ರಸ್ತಾಪ ಬೇಡವೆಂದರು. ಈ ಬಗ್ಗೆ  ಮಂಜುನಾಥ್, ತಹಸೀಲ್ದಾರ್, ಶಾಸಕರ ನಡುವೆ ವಾಗ್ವಾದ ನಡೆದು ಶಾಸಕರು, ಮಂಜುನಾಥ್‌ರನ್ನು ಹೊರಹೋಗುವಂತೆ ಸೂಚಿಸಿ, ಕರೀಗೌಡರನ್ನು ಸನ್ಮಾಸಿದರು. ತಹಸೀಲ್ದಾರ್ ಮಂಜುನಾಥ್ ಅವರನ್ನು ಸಮಾಧಾನಗೊಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement