ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ತ್ಯಾಗ, ಬಲಿದಾನದಿಂದ ಪಡೆದ ದೇಶದ ಸ್ವಾತಂತ್ರ್ಯ ಕಾಪಾಡಿಕೊಳ್ಳಿ'

Rashmi Kasaragodu
Updated On : 16 Aug 2013, 12:55 pm

ಶಿರಾ: ತ್ಯಾಗ ಬಲಿದಾನದಿಂದ ಪಡೆದ ದೇಶದ ಸ್ವಾತಂತ್ರ್ಯವನ್ನು ಶಾಂತಿಯುತವಾಗಿ ಮತ್ತು ಸಂವಿಧಾನಬದ್ಧವಾಗಿ ಎಲ್ಲರೂ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಹಾಗೂ ತಹಸೀಲ್ದಾರ್ ಎಸ್.ವಿ.ಕುಲಕರ್ಣಿ ತಿಳಿಸಿದರು. ಅವರು ಪಟ್ಟಣದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ದೇಶದ ಸಮಸ್ಯೆಗಳೇನೆ ಇರಲಿ ಹಿಂದಿನ ಮಹಾ ನಾಯಕರುಗಳು ಪಡೆದ ಸ್ವಾತಂತ್ರ್ಯ ಕಾಪಾಡಿಕೊಂಡು ಹೋಗಬೇಕಾದುದು ನಮ್ಮ ಕರ್ತವ್ಯ. ಭಾರತವು ಪ್ರಾಚೀನ ಕಾಲದಿಂದಲೂ ಕಲೆ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದು ಇಂದಿಗೂ ಬೇರೆ ದೇಶಗಳಿಗೆ ಮಾದರಿಯಾಗಿದೆ ಎಂದರು.  ಅಧ್ಯಕ್ಷತೆಯನ್ನು ತಾಲೂಕು ಪಂಚಾಯ್ತಿ ಅಧ್ಯಕ್ಷರಾದ ಗಂಗಮ್ಮ ಸಿದ್ದಹನುಮಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಮೂಹಿಕ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಮತ್ತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೂ ಹಾಗೂ ಸ್ವಾತಂತ್ರ ಹೋರಾಟಗಾರರಿಗೆ ಸನ್ಮಾನಿಸಲಾಯಿತು.  ಮುಖ್ಯ ಅತಿಥಿಗಳಾಗಿ ತಾ.ಪಂ. ಉಪಾಧ್ಯಕ್ಷ ಉದಯಶಂಕರ್, ಡಿ.ವೈ.ಎಸ್.ಪಿ. ಜಗದೀಶ್.ಎಲ್, ನಗರಸಭೆ ಸದಸ್ಯರುಗಳಾದ ಷೇಕ್ ಅಹಮದ್, ಮಹಮದ್ ಜಾಫರ್, ಪ್ರಕಾಶ್, ರಾಜಣ್ಣ, ಬಸವರಾಜು, ರೇಣುಕಮ್ಮ, ಅಂಜಿನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜ್ಕುಮಾರ್, ನಗರಸಭೆ ಅಯುಕ್ತರಾದ ಬಿ.ಟಿ.ರಂಗಸ್ವಾಮಿ, ತಾ.ಪಂ. ಇ.ಓ. ವೇದಮೂರ್ತಿ, ಸೇರಿದಂತೆ ಹಲವರು ಹಾಜರಿದ್ದರು.
'ಪ್ರತಿ ವಿದ್ಯಾರ್ಥಿ ದೇಶಭಕ್ತಿ ಮೈಗೂಡಿಸಿಕೊಳ್ಳಲಿ'
ಹುಳಿಯಾರು: ಪ್ರಸ್ತುತ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಗೆ ಮಾರು ಹೋಗುತ್ತಿರುವ ಭಾರತೀಯ ಜನರು, ದೇಶದ ಸಂಸ್ಕೃತಿಯನ್ನು ಮರೆತು ಜೀವನ ನಡೆಸುತ್ತಿದ್ದಾರೆ. ಅಲ್ಲದೆ ದೇಶದ ಬಗ್ಗೆ ಯಾವುದೇ  ಕಾಳಜಿಯಿಲ್ಲದೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿ ದೇಶಭಕ್ತಿಯನ್ನು ಮೈಗೊಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ತಿಳಿಸಿದರು. ಹೋಬಳಿಯ ಕೆಂಕೆರೆ ಶ್ರೀಚನ್ನಬಸವೇಶ್ವರ ಪ್ರಾಥಮಿಕ ಪಾಠಶಾಲೆಯಲ್ಲಿ 67ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೇಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೊಟ್ಟುರಯ್ಯ, ಗ್ರಾ.ಪಂ.ಸದಸ್ಯರಾದ ಬಸವರಾಜು, ಕುಮಾರ್, ಮಾಜಿ ಅಧ್ಯಕ್ಷೆ ಚಂದ್ರಕಲಾ, ಶಿಕ್ಷಕರಾದ ಕುಮಾರ್, ರವಿ, ಗಜೇಂದ್ರ, ಕೃಷ್ಣಸಿಂಗ್, ಅನಿತಾ, ಪ್ರೇಮ, ಜ್ಯೋತಿ, ಶಶಿಕಲಾ, ಲತಾ ಸೇರಿದಂತೆ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement