ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶ್ರೀರಂಗನಾಥ ಪ.ಪೂ. ಕಾಲೇಜಿನಲ್ಲಿ

Rashmi Kasaragodu
Updated On : 16 Aug 2013, 12:50 pm

ಶಿರಾ: ಪಟ್ಟಣದ ಕೆ.ಮಲ್ಲಣ್ಣ ಸ್ಮಾರಕ ಶ್ರೀರಂಗನಾಥ ಪ.ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಹೆಚ್.ಜಿ.ರಂಗಯ್ಯ ದ್ವಜಾರೋಹಣ ನೆರವೇರಿಸಿದರು.  ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಗುಳಿಗೇನಹಳ್ಳಿ ನಾಗರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ನಿರ್ದೆಶಕರುಗಳಾದ ಡಿ.ಸಿ.ಅಶೋಕ್, ಬಾಂಬೆರಾಜಣ್ಣ, ಸತ್ಯನಾರಾಯಣ, ಶ್ರೀನಿವಾಸ್, ಈರಣ್ಣ, ಪ್ರಾಚಾರ್ಯ ಕೆ.ಸೋಮಶೇಖರಪ್ಪ, ಹಿರಿಯ ಉಪನ್ಯಾಸಕರಾದ ಎಂ.ಲೋಕನಾಥ್, ಶಂಕರಪ್ಪ, ವೆಂಕಟಾಚಲ್, ಬಿ.ರಾಮಚಂದ್ರಪ್ಪ, ಸೇರಿದಂತೆ ಹಲವರು ಹಾಜರಿದ್ದರು. ಪ್ರಾಚಾರ್ಯ ಕೆ.ಸೋಮಶೇಖರಪ್ಪ ಸ್ವಾಗತಿಸಿ, ಬಿ.ರಾಮಚಂದ್ರಪ್ಪ ನಿರೂಪಿಸಿದರು. ಶ್ರೀರಂಗನಾಥ ಪ್ರ.ದ. ಕಾಲೇಜಿನ ಪ್ರಾಚಾರ್ಯ ಎಸ್.ಜೆ.ನಾಗರಾಜು ವಂದಿಸಿದರು.



ಈ ದೇಶ ನಮ್ಮದು, ದೇಶಕ್ಕಾಗಿ ನಾವೆಲ್ಲಾ ಎಂದು ಬಾಳಿ
ಹುಳಿಯಾರು: ಇಂದಿನ ಸ್ವಾತಂತ್ರ್ಯ ಅನೇಕ ಮಹಾನ್ ವ್ಯಕ್ತಿಗಳ ಬಲಿದಾನವಾಗಿದ್ದು, ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನದ ಆಚರಣೆ ನಡೆದುಕೊಂಡು ಬಂದಿರುವುದಾಗಿ  ಉಪ ತಹಸೀಲ್ದಾರ್ ಎಚ್.ಬಿ.ಬಸವರಾಜು  ತಿಳಿಸಿದರು.  ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ಗ್ರಾ.ಪಂ ಹಾಗೂ ವಿವಿಧ ಸಂಘ ಸಂಸ್ಥೆ, ನಾನಾ ಶಾಲೆಗಳ ಸಹಯೋಗದಲ್ಲಿ   ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಉದ್ಯಮಿ  ಎಲ್.ಆರ್.ಚಂದ್ರಶೇಖರ್ ಮಾತನಾಡಿ ಭಾರತ ದೇಶದಲ್ಲಿ ಜನಿಸಿರುವ ನಾವೆಲ್ಲ ಪುಣ್ಯವಂತರು ಎಂದರು. ಪಟ್ಟಣದ ನಾನಾ ಶಾಲೆಯ ಮಕ್ಕಳಿಂದ ವಿವಿಧ ದೇಶಭಕ್ತಿ ಗೀತೆಗಳ ಗಾಯನ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement