ಜನತೆ ಮುಂದೆ ಮತ ಭಿಕ್ಷೆ ಬೇಡಲು ಬಂದಿದ್ದೇನೆ
ಕುಣಿಗಲ್: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಈ ಕ್ಷೇತ್ರದ ಜನತೆ ನೀಡಿದ ತೀರ್ಪಿಗೆ ವಿರುದ್ಧವಾಗಿ, ತಮಗೆ ನೀಡಿದ ಸಂಸದನ ಸ್ಥಾನ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆ ಸ್ಥಾನವನ್ನು ನನ್ನ ತಮ್ಮನಿಗೆ ನೀಡುವಂತೆ, ಜನತೆ ಮುಂದೆ ಮತ ಭಿಕ್ಷೆ ಬೇಡಲು ಬಂದಿದ್ದೇನೆಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ, ತಾಲೂಕಿನ ನೀಲತ್ತಹಳ್ಳಿ ಗ್ರಾಮದಲ್ಲಿ, ಕುಣಿಗಲ್ ನಗರ, ಕೊತ್ತಗೆರೆ,ಹುತ್ರಿದುರ್ಗ ಹೋಬಳಿಯ ನೂರಾರು ಬಿಜೆಪಿ ಕಾರ್ಯಕರ್ತರು, ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಬೆಂಬಲಿಸುವುದನ್ನು ವಿರೋಧಿಸಿ, ತಮ್ಮದೇ ಆದ ನಿಲುವು ಕೈಗೊಳ್ಳಲು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜನತೆ ದೇವೇಗೌಡರ ಕುಟಂಬಕ್ಕೆ ಪ್ರಧಾನಿ, ಮುಖ್ಯಮಂತ್ರಿ , ಸಂಸದ, ಶಾಸಕ ಸ್ಥಾನ ಸೇರಿದಂತೆ ಎಲ್ಲಾ ರೀತಿಯ ಅಧಿಕಾರವನ್ನು ನೀಡಿದ್ದಾರೆ. ಅದರೆ, ಡಿ.ಕೆ.ಶಿವ ಕುಮಾರ್ ಕುಟುಂಬ ಇದೇ ಕ್ಷೇತ್ರದವರಾಗಿದ್ದು, ಈ ಹಿಂದೆ ಸಂಸದರಾಗಿ ಅಧಿಕಾರ ಪಡೆದವರು ತಿರಸ್ಕರಿಸಿ ಹೋಗಿದ್ದಾರೆ. ಅವರಿಗೆ ಸಂಸದ ಸ್ಥಾನ ನಿರ್ವಹಿಸುವ ಯೋಗ್ಯತೆ ಇಲ್ಲವೆಂದು ಸಾಬೀತಾಗಿದೆ. ಈ ಸ್ಥಿತಿಯಲ್ಲಿ ಈಗ ಬೇರ್ಯಾರು ಸಿಗದೆ ಅವರ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ, ಇವರಿಂದಲೂ ಸಹ ಯಾವುದೇ ಸಮಸ್ಯೆ ಪರಿಹಾರಕ್ಕೆ ಸಾಧ್ಯವಿಲ್ಲ. ಈಗಾಗಲೆ ಮಧುಗಿರಿಯಲ್ಲಿ ಏನಾಗಿದೆ ಎಂದು ಜನತೆಗೆ ಗೊತ್ತಿದೆ ಎಂದರು.
ಕಾಂಗ್ರೆಸ್ ಬೆಂಬಲಿಸಿ: ಇನ್ನು ತಾಲೂಕಿನ ಬಹುತೇಕ ಬಿಜೆಪಿ ಕಾರ್ಯಕರ್ತರು ಇಲ್ಲಿ ಜಮಾವಣೆಗೊಂಡಿದ್ದೀರಾ, ಸ್ಥಳೀಯ ವಿವಿಧ ಹಂತದ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು, ಜೆಡಿಎಸ್ನವರೊಂದಿಗೆ ಹಲವಾರು ಬಾರಿ ವೈಮನಸ್ಯಕ್ಕೆ ಈಡಾಗಿ, ಈಗ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಒಂದಾಗಿರುವುದಕ್ಕೆ ಅಸಮಾಧಾನಗೊಂಡಿರುವ ತಾವು ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಸೇರಿದಂತೆ, ನಮಗೆ ಸಹಾಯ ಮಾಡಿದ ಕಾರ್ಯಕರ್ತರ ಹಿತರಕ್ಷಣೆಗೆ ತಾವು ಸದಾ ಬದ್ಧರಾಗಿವುದಲ್ಲದೆ ತಾವು ನುಡಿದಂತೆ ನಡೆಯುವ ಜಾಯಮಾನಕ್ಕೆ ಸೇರಿದವರು. ಲೋಕಸಭೆ ಉಪಚುನಾವಣೆಯಲ್ಲಿ ತಮ್ಮ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಗೆಲವಿಗೆ ಸಹಕರಿಸುವಂತೆ ಮನವಿ ಮಾಡಿದರು. ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು. ತಾವು ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಇಲ್ಲದ ಕಾರಣ ಕೇವಲ ಕಾಂಗ್ರೆಸ್ ಬೆಂಬಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದರಲ್ಲದೆ, ತಾವು ಕಾಂಗ್ರೆಸ್ ಸೇರ್ಪಡೆಯಾಗಿಲ್ಲವೆಂದರು.
ಸಭೆಯಲ್ಲಿ ಪ್ರಮುಖರಾದ ಗಂಗೇನಹಳ್ಳಿರಮೇಶ, ಬಡ್ಡಿ ನಾರಾಯಣ, ಶಿವಣ್ಣ,ರೇಣುಕಪ್ಪ, ಮಂಜುನಾಥ, ಪ್ರಭು, ಹರೀಶ,ಎಪಿಎಂಸಿ ಉಪಾಧ್ಯಕ್ಷ ಸುರೇಶ್ ಇತರರು ಇದ್ದರು.