ಜೀಗನಹಳ್ಳಿ ಚಂದ್ರಶೇಖರ್
ಗುಬ್ಬಿ : ತಾಲೂಕಿನ ಜೀಗನಹಳ್ಳಿಯ ರಂಗಭೂಮಿ ಕಲಾವಿದ ಹಾಗೂ ಕಿರುತೆರೆ ನಟ ಜೀಗನಹಳ್ಳಿ ಚಂದ್ರಶೇಖರ್ (58) ಅನಾರೋಗ್ಯದಿಂದ ಗುರುವಾರ ನಿಧನರಾದರು. ಗ್ರಾಮೀಣ ಭಾಗದಲ್ಲಿ ರಂಗ ಕಲೆಯನ್ನು ಉಳಿಸಲು ಹಲವು ಕಾರ್ಯಕ್ರಮಗಳನ್ನು ನಡೆಸಿ ಅವರು ತಾಲೂಕಿನಲ್ಲಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಪಾರ ಅಭಿಮಾನಿಗಳು,ಬಂಧು ಮಿತ್ರರನ್ನು ಅಗಲಿದ್ದಾರೆ. ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಟಿ. ಭೈರಪ್ಪ, ಜಿಲ್ಲಾ ರೈತಮೋರ್ಚ ಅಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಎಸ್. ವಿಜಯ್ಕುಮಾರ್, ಬಿ.ಎಸ್.ಪ್ರಸಾದ್, ಬಿ.ಲೋಕೇಶ್, ಬಸವರಾಜು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.