ಇಂದು ವಿಗ್ರಹ ಪ್ರತಿಷ್ಠಾಪನೆ
ತಿಪಟೂರು: ತಾಲೂಕಿನ ಅಂಚೆಕೊಪ್ಪಲಿನ ಕೋದಂಡರಾಮಲಿಂಗೇಶ್ವರ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಉದ್ಘಾಟನಾ ಸಮಾರಂಭವು ಆ.18 ಮತ್ತು ಆ.19 ರಂದು ನಡೆಯಲಿದೆ. 18ರಂದು ಗಣಪತಿ ಹೋಮ, ನವಗ್ರಹ ಹೋಮ, ಕಲಶಸ್ಥಾಪನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಾನ್ನಿಧ್ಯವನ್ನು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಮಾಯಸಂದ್ರದ ಶಿವಕುಮಾರನಾಥ ಸ್ವಾಮೀಜಿ, ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನೆಯನ್ನು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಕೆ. ಷಡಕ್ಷರಿ, ತೋಟಗಾರಿಕೆ ಇಲಾಖೆ ಪ್ರ. ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡರು, ಮಾಜಿ ಶಾಸಕರಾದ ಬಿ.ಸಿ. ನಾಗೇಶ್, ಬಿ.ನಂಜಾಮರಿ ಮತ್ತಿತರರು ಭಾಗವಹಿಸಲಿದ್ದಾರೆ. ಆ.19ರಂದು ಕುಂಭಾಭಿಷೇಕ, ಪೂರ್ಣಾಹುತಿ ಕಲಶಮಾರ್ಜನ, ಕಲಶಸ್ಥಾಪನೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ಗಣಪತಿ ದೇವಾಲಯ ಉದ್ಘಾಟನೆ
ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟೀಕೆರೆ ಹೋಬಳಿ ಪಂಕಜನಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ಸುಕ್ಷೇತ್ರದಲ್ಲಿ ಗಣಪತಿ ದೇವಾಲಯದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಆ. 19ರಂದು ಸೋಮವಾರ ಬೆಳಗ್ಗೆ 7.15ಕ್ಕೆ ಗಣಪತಿ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾನ ಮತ್ತು ಮಲ್ಲಿಕಾರ್ಜುನ ಸ್ವಾಮಿ ಚರಮೂರ್ತಿ ದೇವಾಲಯದಲ್ಲಿ ಬಸವೇಶ್ವರ ವಿಗ್ರಹ ಪ್ರತಿಷ್ಠಾಪನೆ ಮಹಾಕಾರ್ಯವನ್ನು ತಮ್ಮಡೀಹಳ್ಳಿ ಡಾ. ಅಭಿನವ ಮಲ್ಲಿಕಾಜುನ ದೇಶಿಕೇಂದ್ರ ಸ್ವಾಮಿ ಅವರು ಮತ್ತು ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಜಿಯವರು ನೆರವೇರಿಸಲಿದ್ದಾರೆ.