ಉಚಿತ ನೋಟ್ ಬುಕ್ ವಿತರಣೆ
ತುಮಕೂರು: ಅಖಿಲ ಕರ್ನಾಟಕ ಎಚ್.ಎನ್. ದೀಪಕ್ ಯವ ಸೇನೆಯ ವತಿಯಿಂದ ಮರನಾಯಕನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಬ್ಯಾಗ್ ವಿತರಿಸಲಾಯಿತು.
ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್.ಎನ್. ದೀಪಕ್ ಅವರ 37ನೇ ವರ್ಷದ ಹುಟ್ಟಹಬ್ಬದ ಅಂಗವಾಗಿ ಯುವ ಸೇನೆಯ ವತಿಯಿಂದ ವಿತರಿಸಲಾಯಿತು.
ಯುವ ಸೇನೆಯ ಜಿಲಾಧ್ಯಕ್ಷ ಎನ್.ರಘು, ಜಯ ಕರ್ನಾಟಕ ಆಟೋ ಘಟಕದ ಅಧ್ಯಕ್ಷ ನಾಗೇಂದ್ರಪ್ಪ, ಗ್ರಾಮಾಂತರ ಅಧ್ಯಕ್ಷ ಲಕ್ಕಪ್ಪ, ರುದ್ರೇಶ್, ಅಂಜಿನಪ್ಪ, ರಾಜು, ವಿಜಿ ಮೊದಲಾದವರು ಉಪಸ್ಥಿತರಿದ್ದರು.