ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಂಬಾರಹಳ್ಳಿಯಲ್ಲಿ ಗ್ರಾಮ ಸ್ವಚ್ಛತಾ ಕಾರ್ಯಕ್ರಮ

Vishwanath S
Updated On : 19 Aug 2013, 12:24 pm

ಶಿರಾ:  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ವಲಯದ ಕುಂಬಾರಹಳ್ಳಿ ಗ್ರಾಮದಲ್ಲಿ ನಾಗರೀಕ ಪ್ರಜ್ಞಾ ಮತ್ತು ಗ್ರಾಮ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಸ್ಥಳೀಯ ಪಂಚಾಯ್ತಿ ಸದಸ್ಯ ನಾಗರಾಜು ಉದ್ಘಾಟಿಸಿದರು. ಒಕ್ಕೂಟದ ಇಂತಹ ಕಾರ್ಯಕ್ರಮವು ಗ್ರಾಮದಲ್ಲಿ ನಡೆಸುವುದರಿಂದ ಗ್ರಾಮ ಸ್ವಚ್ಛತೆ ಬಗ್ಗೆ ಬಗ್ಗೆ ಜನರಲ್ಲಿ ಹರಿವು ಮೂಡಿದಂತಾಗಿದೆ ಎಂದರು. ವಲಯ ಮೇಲ್ವಿಚಾರಕರಾದ ಪ್ರಶಾಂತ್ ಮಾತನಾಡಿ, ನಾಗರಿಕ ಪ್ರಜ್ಞಾ ಕಾರ್ಯಕ್ರಮವನ್ನು ಈ ದಿನ ನಮ್ಮ ಸಂಸ್ಥೆಯಿಂದ 22 ಜಿಲ್ಲೆಗಳಲ್ಲಿ ನಡೆಸುತ್ತಿದೆ. ಪೂಜ್ಯರ ಕನಸಿನ ಕಾರ್ಯಕ್ರಮ ಇದಾಗಿದೆ.  ಪ್ರತಿ ಸದಸ್ಯರು ಒಗ್ಗಟ್ಟಾಗಿ ಸೇರಿ ಗ್ರಾಮ ಸ್ವಚ್ಛತೆ ನಡೆಸುವುದರಿಂದ ನಮಗೆ ಉಂಟಾಗುವ ಕಾಯಿಲೆಗಳು ಕಡಿಮೆಯಾಗುತ್ತದೆ. ಕಾರ್ಯಕ್ರಮ ಜನರಿಗೆ ನಿರಂತರ ಗ್ರಾಮ ಸ್ವಚ್ಛತೆ ಮಾಡುವಂತೆ ಪ್ರೇರೆಪಣೆಯಾಗಬೇಕು ಎಂದರು. ಸೇವಾ ಪ್ರತಿನಿಧಿ ಯೋಗೀಶ್, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಒಕ್ಕೂಟ ಕಾರ್ಯಕರ್ತೆ ಲತಾ, ಅಧ್ಯಕ್ಷ ಬೊಮ್ಮಣ್ಣ ಉಪಸ್ಥಿತರಿದ್ದರು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಟ್ಟು 60 ಜನ ಸದಸ್ಯರು ಸೇರಿಕೊಂಡು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement