ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ವರದಕ್ಷಿಣೆ ಪಡೆಯೋದು ಕಾನೂನುಬಾಹಿರ

Vishwanath S
Updated On : 19 Aug 2013, 12:23 pm

ಕ.ಪ್ರ.ವಾರ್ತೆ ,  ಕುಣಿಗಲ್ ,  ಆ. 18
ಯಾವುದೇ ವ್ಯವಹಾರಗಳು ಕಾನೂನಿನ ಚೌಕಟ್ಟಿನಲ್ಲಿ ನಿಷೇಧವಾಗಿದೆ. ಅಂತಹ ವ್ಯವಹಾರಗಳಿಗೆ ಬರೆಸಿಕೊಳ್ಳುವ ಕರಾರುಗಳು ಶೂನ್ಯ ಮೌಲ್ಯ ಹೊಂದಿರುತ್ತವೆಂದು ನ್ಯಾಯಾಧೀಶೆ ಆರ್.ಶಾರದ ತಿಳಿಸಿದರು.
ಪಟ್ಟಣದ ಬಿಜಿಎಸ್ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಕಾನೂನು ಅರಿವು- ನರೆವು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಎರಡೂ ಅಂಶಗಳು ಕಾನೂನಿಗೆ ವಿರುದ್ಧವಾಗಿವೆ. ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಬಹುತೇಕ ಮಂದಿ ವರದಕ್ಷಿಣೆ ನೀಡಲು ಸಾಧ್ಯವಾಗದಂತಹ ಸಂದರ್ಭ ಕರಾರುಗಳನ್ನು ಲಿಖಿತ ರೂಪದಲ್ಲಿ ಮಾಡಿಕೊಂಡಿರುತ್ತಾರೆ.  ಇಂತಹ ಸಂದರ್ಭ ಈ ಕರಾರುಗಳು ಶೂನ್ಯ ಮೌಲ್ಯಗಳನ್ನು ಹೊಂದಿರುತ್ತವೆ. ವಿದ್ಯಾರ್ಥಿ ದಿಸೆಯಲ್ಲಿ ದೈನಂದಿನ ಜೀವನದಲ್ಲಿ ಎದುರುವ ಹಲವು ಸಮಸ್ಯೆಗಳ ಕುರಿತಂತೆ ಕಾನೂನಿನ ಅರಿವನ್ನು ಹೊಂದುವ ಮೂಲಕ ನೆಮ್ಮದಿಯುತ ಜೀವನ ನಿರ್ವಹಣೆ ಸಾಧ್ಯ ಎಂದರು.
ವಿದ್ಯಾರ್ಥಿಗಳೊಂದಿಗೆ ಸರಳ ಕಾನೂನುಗಳ ಬಗ್ಗೆ ಪ್ರಶ್ನೋತ್ತರ ಸಂವಾದ ನಡೆಸುವ ಮೂಲಕ ಅವರಲ್ಲಿ ವಿನೂತನವಾಗಿ ಕಾನೂನು ಅರಿವು ಮೂಡಿಸಿದರು.
ನ್ಯಾಯಾಧೀಶರಾದ ಎನ್.ಮುನಿರಾಜು, ಕನಿಷ್ಠ ಕಾನೂನುಗಳ ಬಗ್ಗೆ ಅರಿವು ಇರುವಂತನಿಗೆ ವ್ಯಾಜ್ಯವಿಲ್ಲದ ನೆಮ್ಮದಿಯುವ ಜೀವನ ಸಾಧ್ಯ. ಕಾನೂನಿನ ನೆರವಿಲ್ಲದೆ ಮಾಡಿದಂತ ತಪ್ಪಿಗೆ ಕ್ಷಮೆ ಇರುವುದಿಲ್ಲ. ಆದ್ದರಿಂದ ಪ್ರತಿ ನಾಗರಿಕನೂ ಕನಿಷ್ಠ ಕಾನೂನು ಅರಿವು ಹೊಂದಬೇಕು ಎಂದರು.
ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಣಿ ಮಕ್ಕಳ ಹಕ್ಕುಗಳ ಬಗ್ಗೆ, ವಕೀಲ ಸುರೇಶ್ ರ್ಯಾಗಿಂಗ್ ನಿಯಂತ್ರಣ ಕಾಯಿದೆ ಬಗ್ಗೆ, ವಕೀಲ ಸಂಘದ ಅಧ್ಯಕ್ಷ ದಯಾನಂದ್, ಸಾಮಾನ್ಯ ಕಾನೂನಿನ ಬಗ್ಗೆ ಹಾಗೂ ಎಪಿಪಿ ಸುರೇಖಾ ಹಿರೇಮಠ ಮಹಿಳೆ ಮತ್ತು ಕ್ರಿಮಿನಲ್ ಕಾನೂನಿನ ಬಗ್ಗೆ ಕಿರು ಉಪನ್ಯಾಸ ನೀಡಿದರು.
ಪ್ರಾಚಾರ್ಯ ಚೌಡಪ್ಪ, ವಕೀಲರಾದ ಮುಮ್ತಾಜ್ ಅಹಮದ್, ಹುಚ್ಚೇಗೌಡ, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement