ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿಕ್ಷಣ ಪ್ರಗತಿಯಿಂದ ಸಾಮಾಜಿಕ ಅಭಿವೃದ್ಧಿ: ಶಂಕರಾನಂದ

Vishwanath S
Updated On : 19 Aug 2013, 12:23 pm

ಕ.ಪ್ರ.ವಾರ್ತೆ ,  ಗುಬ್ಬಿ ,  ಆ. 18
ಸಮಾಜದ ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಿರಬೇಕಾದರೆ ಶೈಕ್ಷಣಿಕ ಅಭಿವೃದ್ಧಿಮುಖ್ಯ ಎಂದು ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಾನಂದ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಎಚ್‌ಕೆಜಿಎನ್ ಚಾರಿಟಬಲ್ ಟ್ರಸ್ಟ್, ಗ್ಲೋಬಲ್ ಎಜುಕೇಷನ್ ಮತ್ತು ತುಮಕೂರಿನ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವೇತನಾ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಮುಸ್ಲಿಂ ಸಮುದಾಯದ ಮಕ್ಕಳಿಗೆ ಮಾತ್ರ ಪ್ರತಿಭಾ ಪುರಸ್ಕಾರ ನೀಡದೆ ಎಲ್ಲಾ ವರ್ಗದ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಅಭಿನಂದನಾರ್ಹ. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಮಾತನಾಡಿ ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತ ಟ್ರಸ್ಟ್ ಕಾರ್ಯ ಮಹತ್ವದಾಗಿದೆ ಎಂದು ತಿಳಿಸಿದರು.
ಗುಬ್ಬಿಯ ಎಚ್‌ಕೆಜಿಎನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಲೀಂ ಪಾಷಾ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣದ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ವತಿಯಿಂದ ಆರ್ಥಕ ನೆರವು ಹಾಗೂ ಸಹಕಾರ ನೀಡಲು ಚಿಂತನೆ ನಡೆಸಲಾಗುತ್ತಿದೆ. ಕೇವಲ ಮುಸ್ಲಿಂ ಸಮುದಾಯದ ಮಕ್ಕಳಿಗೆ ಅಲ್ಲದೆ ಸಮಾಜದ ಎಲ್ಲಾ ವರ್ಗದ ಮಕ್ಕಳಗೆ ಶಿಕ್ಷಣಕ್ಕೆ ನೆರವು ನೀಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಗ್ಲೋಬಲ್ ಎಜುಕೇಷನ್ ಮತ್ತು ತುಮಕೂರಿನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಬ್ಜಲ್ ಷರೀಫ್, ಪ.ಪಂ. ಸದಸ್ಯ ಜಿ.ಮಹಮ್ಮದ್ ಸಾದಿಕ್, ಮಾಜಿ ಪುರಭಾ ಸದಸ್ಯ ಅಲ್‌ಹಜ್ ಮಹಮ್ಮದ್ ಮುಸ್ತಾಫ, ಗುಬ್ಬಿ ಕಾಯಿಪೇಟೆಯ ಮಸ್ಜಿದ್ ಕಾರ್ಯದರ್ಶಿ ಜಿ.ಎಲ್. ಶೌಕತ್ ಆಲಿ, ಎಸ್.ಎಸ್. ಟ್ರಾನ್ಸ್‌ಫೋರ್ಟ್ ಜಿ.ಎಸ್. ಗೌಸ್ ಮೊಹಿನುದ್ದೀನ್, ಗುಬ್ಬಿಯ ಎಚ್.ಕೆ.ಜಿ.ಎನ್. ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಅಲ್‌ಹಜ್ ಸೈಯದ್ ನಾಸೀರುದ್ದೀನ್, ಅಧ್ಯಕ್ಷ ಸಲೀಂ ಪಾಷಾ, ಕಾರ್ಯದರ್ಶಿ ನಜೀರ್ ಪಾಷಾ ಹಾಗೂ ಗುಬ್ಬಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಗುಬ್ಬಿ, ಗುಬ್ಬಿಯ ಲಯನ್ಸ್ ಅಧ್ಯಕ್ಷ ಜಿ.ಆರ್. ಶಿವಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement