ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾತಿ, ಧರ್ಮ ಬಿಡಿ, ವಿಶ್ವ ಮಾನವರಾಗಿ

Vishwanath S
Updated On : 20 Aug 2013, 12:52 pm

ಕ.ಪ್ರ.ವಾರ್ತೆ ,  ತುಮಕೂರು ,  ಆ. 19
ಜಾತಿ, ಧರ್ಮ, ಭಾಷೆ ಮೇಲಿನ ವ್ಯಾಮೋಹ ಬಿಟ್ಟು  ಮಾನವ ಧರ್ಮವನ್ನು ಜೀವನ ಸೂತ್ರವನ್ನಾಗಿ ಅಳವಡಿಸಿಕೊಂಡು ವಿಶ್ವ ಮಾನವರಾಗಬೇಕು ಎಂದು ಸಿದ್ದಗಂಗಾ ಮಠಾಧೀಶ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಶಿರಾ ರಸ್ತೆಯಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ನೂತನವಾಗಿ ಆರಂಭಿಸಿದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಜನಸ್ನೇಹಿ ಸಂಶೋಧನೆ ನಡೆಯಲಿ: ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಜನರ ಆರೋಗ್ಯದಲ್ಲಿ ವ್ಯತ್ಯಾಸ ಸಾಮಾನ್ಯವಾಗಿದೆ. ಇಂತಹ ಸವಾಲಿನಲ್ಲಿ ಕಾರ್ಯನಿರ್ವಹಿಸಬೇಕಾದ ವೈದ್ಯರು ಹೆಚ್ಚು ಅಧ್ಯಯನ ನಡೆಸುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಹೆಚ್ಚಿನ ಜ್ಞಾನ ಸಂಪಾದಿಸಬೇಕು: ಸಮಾಜದಲ್ಲಿ ವೈದ್ಯರ ಸೇವೆಗೆ ವಿಶೇಷ ಗೌರವ ನೀಡಲಾಗಿದೆ. ದೇವರಿಗೆ ಹೋಲಿಸಲಾಗಿದೆ. ಜನರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೇವೆ ನೀಡಲು ಹೆಚ್ಚಿನ ಜ್ಞಾನ ಸಂಪಾದಿಸಬೇಕು ಎಂದು ಉದರ ಹಾಗೂ ಕರುಳು ರೋಗ ತಜ್ಞ ಡಾ.ಕೆ.ಎಂ.ನಾಗರಾಜು ಹೇಳಿದರು.
ವೃತ್ತಿಯಲ್ಲಿ ನೈತಿಕತೆ, ಪರಿಶುದ್ಧತೆ ಇರಲಿ: ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಪ್ರತಿ ದಿನ ಬದಲಾವಣೆಗಳಾಗುತ್ತಿವೆ ವಿದ್ಯಾರ್ಥಿಗಳು ಸತತ ಅಭ್ಯಾಸ, ಕಠಿಣ ಪರಿಶ್ರಮದ ಮೂಲಕ ಸವಾಲಿನ ವೃತ್ತಿಯಲ್ಲಿ ತೃಪ್ತಿ ಕಾಣಬೇಕು. ವೃತ್ತಿಯಲ್ಲಿ ನೈತಿಕತೆ ಮತ್ತು ಪರಿಶುದ್ಧತೆ ಕಾಪಾಡಿಕೊಳ್ಳಬೇಕು. ಹಣಕ್ಕೆ ಮಹತ್ವ ನೀಡದೆ ಮೌಲ್ಯ, ಆದರ್ಶಗಳನ್ನು ಪಾಲಿಸಬೇಕು ಎಂದರು.
ಯುವಕರಿಂದ ಮಾತ್ರ ಬದಲಾವಣೆ: ಅಭಿವೃದ್ಧಿ ಪಥದಲ್ಲಿರುವ ದೇಶದಲ್ಲಿ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯವಿದೆ. ಜಾಗತಿಕ ಮಟ್ಟದಲ್ಲಿ ಭಾರತ ಸ್ಪರ್ಧೆ ನೀಡಬೇಕಾದರೆ ಹೆಚ್ಚು ಹೆಚ್ಚು ಸಂಶೋಧನೆಗಳಲ್ಲಿ ತೊಡಗಬೇಕು ಎಂದು ರಾಮಕೃಷ್ಣ ಆಶ್ರಮದ ಡಾ.ವೀರೇಶಾನಂದ ಸ್ವಾಮೀಜಿ ಹೇಳಿದರು.
ಶ್ರೀದೇವಿ ಚಾರಿಟಬಲ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್, ವೈದ್ಯಕೀಯ ನಿರ್ದೇಶಕ ಡಾ.ರಮಣ್, ಪ್ರಾಚಾರ್ಯ ಡಾ.ಎಸ್.ಡಿ. ದೇಸಾಯಿ, ಡೀನ್ ಡಾ. ಗುರುಮೂರ್ತಿ, ಡಾ.ವಿಜಯ್ ತುಬಾಕಿ, ಶಾಂತಲಾ ದುರ್ಗಾದೇವಿ, ಗಂಗಾಧರ ಕೂಡ್ಗಿ, ಅಂಬಿಕಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement