'ಕ್ರೀಡೆಯಿಂದ ದೇಹ ಬಲಿಷ್ಠ'ಮ
ಚಿಕ್ಕನಾಯನಕಹಳ್ಳಿ: ಓದು ಬುದ್ಧಿ ಬಲಿಷ್ಠಗೊಳಿಸಿದರೆ, ಕ್ರೀಡೆ ದೇಹ ಬಲಿಷ್ಠಗೊಳಿಸಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ದೈಹಿಕವಾಗಿಯೂ ಬಲಿಷ್ಟರಾಗಿ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಕಿವಿಮಾತು ಹೇಳಿದರು. ಮಂಗಳವಾರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.
ಸವಾಲಾಗಿ ಸ್ವೀಕರಿಸಿ: ಇಂದಿನ ಸೋಲು ಮುಂದಿನ ಗೆಲುವಿಗೆ ಸೋಪಾನ. ವಿಫಲವಾದ ಒಂದೇ ಪ್ರಯತ್ನಕ್ಕೆ ನಿರಾಶರಾಗ ಬೇಡಿ. ಕ್ರೀಡೆಯಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಯಶಸ್ಸು ಕಾಣಬಹುದು. ಈ ನಿಟ್ಟಿನಲ್ಲಿ ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ನೀಡಿ. ಪಕ್ಷಪಾತ ಮಾಡಬೇಡಿ, ಇದರಿಂದ ಮಕ್ಕಳ ಮನಸ್ಸು ಮುದುಡುವುದಕ್ಕೆ ಅವಕಾಶವಾಗಬಾರದು ಎಂದರು.
ಅಂಕ ಚಿಂತನೆ ಸರಿಯಲ್ಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ, ಪೋಷಕರು ಮಕ್ಕಳನ್ನು ಬರೀ ಅಂಕಗಳಿಸುವ ಯಂತ್ರಗಳ್ನನಾಗಿ ತಯಾರು ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸುವು ಸರಿಯಲ್ಲ. ಅವರಿಗೂ ಸ್ವತಂತ್ರವಾಗಿ ಯೋಚಿಸುವ ಅವಕಾಶ ನೀಡಿರುವ ಭವಿಷ್ಯದ ಆಯ್ಕೆ ಅವರಿಗೆ ಬಿಡಿ. ಅವರನ್ನು ಪುಸ್ತಕದ ಹುಳುಗಳನ್ನಾಗಿ ಪರಿವರ್ತಿಸ ಬೇಡಿ. ಇದು ಆರೋಗ್ಯಕರ ಬೆಳವಣಿಗೆಯಲ್ಲ.ಕ್ರೀಡೆ ಮಕ್ಕಳ ದೈಹಿಕ ಆರೋಗ್ಯ ಬೆಳವಣಿಗೆಯಲ್ಲಿ ಪ್ರಮುಖಪಾತ್ರ ವಹಿಸುತ್ತದೆ.ಸದೃಢವಾದ ಶರೀರಮೊಂದಿದ್ದರೆ ಏನುಬೇಕಾದರು ಸಾಧಿಸಬಹುದು.ಇಂದು ನಮ್ಮದೇಶದಲ್ಲಿರುವ 120 ಕೋಟಿ ಜನಸಂಖ್ಯೆಯಲ್ಲಿ ದೇಶದ ಮಾನ ಕಾಪಾಡುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ವ್ಯಕ್ತಿಗಳನ್ನು ತಡಕಬೇಕಿದೆ. ಇದು ನಮ್ಮ ದೇಶಕ್ಕಾಗಿರುವ ಅವಮಾನ.ಸರಿಯಾದ ಮಾರ್ಗದರ್ಶನ ದೊರೆತರೆ ಪ್ರಪಂಚದ ಪದಕಗಳ್ನನೆಲ್ಲಾ ಗೆಲ್ಲುವ ತಾಕತ್ತು ನಮ್ಮವರಿಗಿದೆ ಎಂದರು. ತಾಲೂಕು ನೌಕರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ, ಕ್ರೀಡೆಯಲ್ಲಿ ಸ್ಪರ್ಧೆ ಮುಖ್ಯವೇ ಹೊರತು, ಗೆಲ್ಲುವುದೊಂದೆ ಗುರಿಯಾಗಬಾರದು.ಆದರೆ ಕ್ರೀಡೆಯಲ್ಲಿ ಗೆಲ್ಲುವ ಛಲದಿಂದ ಭಾಗವಹಿಸಬೇಕು ಎಂದರು.ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ಕಾಮಾಕ್ಷಮ್ಮ ಮಾತನಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ ಮಾತನಾಡಿ, ಕ್ರೀಡೆಯಲ್ಲಿ ಎಲ್ಲರು ಗೆಲ್ಲುವುದು ಸಾಧ್ಯವಿಲ್ಲ,ಆದರೆ ಗೆಲುವಿಗೆ ಪ್ರಯತ್ನಿಸುವುದು ತಪ್ಪಲ್ಲ ಎಂದರು. ರಾಜ್ಕುಮಾರ್ ನಿರೂಪಿಸಿದರು.