ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಭಯೋತ್ಪಾದನೆ ತಡೆಗೆ ಯುವಶಕ್ತಿ ಒಂದಾಗಿ'

Vishwanath S
Updated On : 21 Aug 2013, 12:57 pm

ತುಮಕೂರು: ಪ್ರತಿಯೊಂದು ರಾಷ್ಟ್ರದಲ್ಲಿಯೂ ಭಯೋತ್ಪಾದನೆಗಳು ತಾಂಡವಾಡುತ್ತಿವೆ ಎಂದು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ  ಅನೀಸ್ ವಿಷಾದಿಸಿದರು. ಅವರು ಗೂಳೂರಿನ ಸೂಫ್ಹಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ವಿಶ್ವ ಭಯೋತ್ಪಾದನಾ ವಿರೋಧಿ ದಿನಾಚರಣೆಯನ್ನು ತರಗತಿಯ ಉಪನ್ಯಾಸಕರ ಸಮ್ಮುಖದಲ್ಲಿ ಆಚರಿಸಲಾಯಿತು.
ಭಯೋತ್ಪಾನಾ ಗುಂಪುಗಳು ಯುವ ಪೀಳಿಗೆಯನ್ನು ತಮ್ಮ ಗುಂಪಿಗೆ ಮನವೊಲಿಸಿ ಕರೆಯುತ್ತಿದ್ದಾರೆ. ನುರಿತ ತರಬೇತಿ ನೀಡಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುತ್ತಿದ್ದಾರೆ. ಇದರಿಂದ ಯುವ ಪೀಳಿಗೆಯನ್ನು ಅಪಾಯದ ಅಂಚಿಗೆ ಬಲವಂತವಾಗಿ ನೂಕುತ್ತಿರುವ ಸಂಗತಿಯನ್ನು ನೋಡಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದಿರಲಿ: ಇಂದು ವಿಶ್ವ ಭಯೋತ್ಪಾದನ ವಿರೋಧ ದಿನವನ್ನಾಗಿ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮ ಇಂದಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ  ಬೆಳೆಯಬೇಕಾಗಿದೆ ಎಂದರು.
ಎಚ್ಚರ ಅತ್ಯಗತ್ಯ: ಎಂ.ಕಾಂ ವಿದ್ಯಾರ್ಥಿನಿ ಬಿಂದು ಮಾತನಾಡಿ, ಭಯೋತ್ಪಾದನೆ ಸರ್ವನಾಶವಾಗಬೇಕಾದರೆ ಭಾರತೀಯ ಪ್ರತಿಯೊಬ್ಬ ಪ್ರಜೆಯು ಎಚ್ಚರಿಕೆ ವಹಿಸಿ ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಮುಂದಾದಾಗ ಮಾತ್ರ ಭಯೋತ್ಪಾದನೆ ಎಂಬ ಕಳಂಕವನ್ನು ದೇಶದಿಂದ ಅಳಿಸಲು ಸಾಧ್ಯ ಎಂದರು.
ಭಯೋತ್ಪಾದನಾ ಸಂಘಟನೆಗಳು ವಿವಿಧ ರೀತಿಯ ಆಮಿಷಗಳನ್ನು ಅಮಾಯಕ ಜನತೆಗೆ ನೀಡಿ ತಮ್ಮ ಕಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ, ಹೆಚ್ಚಿನದಾಗಿ ವಿದ್ಯಾರ್ಥಿಗಳನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಬಲೆ ಬೀಸುತ್ತಿದ್ದಾರೆ. ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಬಯಸುವ ವಿದ್ಯಾರ್ಥಿಗಳು ಭಯೋತ್ಪಾದ ಗುಂಪಿಗೆ ಸೇರಿಕೊಳ್ಳುತ್ತಿರುವುದನ್ನು ಕಂಡರೆ ಭಾರತದ ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡುವಂತಹವರು ಮನುಷ್ಯರ ಪ್ರಾಣ ಕಿತ್ತು ತಿನ್ನುವ ಪ್ರಯತ್ನ ಮಾಡುತ್ತಿದ್ದಾರೆ, ಇಂಥ ಸಮಾಜ ಘಾತುಕ ಕೆಲಸಗಳಿಂದ ನಮ್ಮ ದೇಶದ ಪರಿಸ್ಥಿತಿ ಹದಗೆಟ್ಟಿದೆ ಎಂದು ವಿಷಾದಿಸಿದರು.
ಹೊಸಬರ ಹಿನ್ನೆಲೆ ವಿಚಾರಿಸಿ: ತಮ್ಮ- ತಮ್ಮ ಊರಲ್ಲಿರುವ  ಸಾರ್ವಜನಿಕರಿಗೆ ಅಪರಿಚಿತ ವ್ಯಕ್ತಿಗಳಿಗೆ ವಾಸವಾಗಿರಲು ಮನೆಗಳನ್ನು ಕೊಡುವಾಗ ಅವರ ಹಿನ್ನೆಲೆಯನ್ನು ವಿಚಾರಿಸಿದ ನಂತರ ಸೂಕ್ತ ವ್ಯಕ್ತಿ ಎಂದು ತಿಳಿದು ಬಂದಲ್ಲಿ ಅಂತವರಿಗೆ ಮನೆಗಳನ್ನು ಬಾಡಿಗೆಗೆ ನೀಡುವಂತೆ ತಿಳುವಳಿಕೆ ನೀಡಬೇಕಾಗಿದೆ. ಹಾಗೂ ಹೊರಗಿನ ಪ್ರದೇಶದಲ್ಲಿ ಸಂಚಾರ ಮಾಡುವಾಗ ಭಯೋತ್ಪಾದಕ ಸಂಘಟನೆಗಳ ಸುಳಿವು ಸಿಕ್ಕಿದ್ದಲ್ಲಿ ತಕ್ಷಣ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ತಿಳಿಸುವುದರಿಂದ ಭಯೋತ್ಪಾದನೆಯನ್ನು ತಡೆಗಟ್ಟಬಹುದಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement