ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಹಿಂದುಳಿದ ವರ್ಗಕ್ಕೆ ಅರಸು ಕೆಲಸ ವರದಾನ'

Vishwanath S
Updated On : 21 Aug 2013, 12:56 pm

ಕುಣಿಗಲ್: ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ, ದಲಿತರ ಸಮಗ್ರ ಏಳಿಗೆಗೆ ಶ್ರಮಿಸಿದ ಮಾಜಿ ಸಿಎಂ ದಿ.ಡಿ.ದೇವರಾಜ್ ಅರಸ್ ಅವರು ಕೈಗೊಂಡ ಅಭಿವೃದ್ಧಿ ಪರ ರಾಜಕಾರಣ, ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಹಿಂದುಳಿದ ವರ್ಗಗಳ ಯುವ ವೇದಿಕೆ ಅಧ್ಯಕ್ಷ ನರಸಿಂಹ ಅಭಿಪ್ರಾಯಪಟ್ಟರು.
ಮಂಗಳವಾರ ಮಾಜಿ ಸಿಎಂ ದಿ.ಡಿ.ದೇವರಾಜ ಅರಸು 98ನೇ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಿಸಿದ ನಂತರ ಅವರು ಮಾತನಾಡಿದರು.  
 ದೇಶದ ಒಟ್ಟಾರೆ ಜನಸಂಖ್ಯೆಯ ಬಹುಪಾಲು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಸಮುದಾಯವನ್ನು ತಮ್ಮ ಮಾತಿನ ಮೋಡಿಯಿಂದ ಚುನಾವಣೆ ಸಮಯದಲ್ಲಿ ಮಾತ್ರ ಮತಬ್ಯಾಂಕ್‌ನ್ನಾಗಿ ಬಳಸಿಕೊಳ್ಳುವಂತ ಪ್ರವೃತ್ತಿ ತೋರದೆ,
ಹಲವು ಜನಪರ ಕಾರ್ಯಕ್ರಮಗಳನ್ನು ಘೋಷಿಸಿ, ಪ್ರಾಮಾ  ಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ದೇವರಾಜ ಅರಸು ದಿಟ್ಟ ಕ್ರಮ ಕೈಗೊಂಡರು ಎಂದು ಶ್ಲಾಘಿಸಿದರು.
ಸಾರ್ವಜನಿಕ ಆಸ್ಪತ್ರೆಯ ಹಲವು ರೋಗಿಗಳಿಗೆ ಹಾಲಿ, ಬ್ರೆಡ್ ಹಾಗೂ ಹಣ್ಣನ್ನು ವಿತರಿಸಿದ್ದು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್‌ಬಾಬು, ಮುಖಂಡರಾದ ರಂಗನಾಥ್,ರಘು, ರಾಜೇಶ,ಗೋಪಿ,ಶ್ರೀನಿವಾಸ್, ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement