ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಳಪೆ ಆಹಾರ ಖಂಡಿಸಿ ತಾಲೂಕು ಕಚೇರಿಗೆ ವಿದ್ಯಾರ್ಥಿಗಳ ಮುತ್ತಿಗೆ

Vishwanath S
Updated On : 22 Aug 2013, 12:36 pm

ಪಾವಗಡ: ಕಳಪೆ ಆಹಾರ ವಿತರಣೆ ಹಾಗೂ ವಿದ್ಯಾರ್ಥಿ ನಿಲಯ ನಿರ್ವಹಣೆಯಲ್ಲಿ ನಿಲಯ ಪಾಲಕರೊಬ್ಬರ ನಿರ್ಲಕ್ಷ್ಯ ವಿರೋಧಿಸಿ ಪಟ್ಟಣದ ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ನ ಪಿಯುಸಿ ವಿದ್ಯಾರ್ಥಿಗಳು ಬಕೆಟ್‌ಗಳಲ್ಲಿ ತುಂಬಿಸಿಕೊಂಡ ತಿಂಡಿಯೊಂದಿಗೆ ಬುಧವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಪಿಯುಸಿ ಹಾಸ್ಟೆಲ್ ನಿರ್ವಹಣೆಯಲ್ಲಿ ನಿಲಯ ಪಾಲಕ ರಾಧಕೃಷ್ಣ ಎಂಬುವರ ನಿರ್ಲಕ್ಷ್ಯ ಸೇರಿದಂತೆ ಕೊಳೆತ ತರಕಾರಿ ಹಾಗೂ ಗುಣ ಮಟ್ಟವಲ್ಲದ ಕಳಪೆ ಅಕ್ಕಿಯಿಂದ ತಯಾರಿಸಿದ ಅಡಿಗೆ ನಿತ್ಯ ವಿದ್ಯಾರ್ಥಿಗಳಿಗೆ ನೀಡುವುದರಿಂದ ಕಳಪೆ ಆಹಾರ ಸೇವಿಸಿದ ಹಾಸ್ಟೆಲ್ ವಿದ್ಯಾರ್ಥಿಗಳು ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು. ವಿದ್ಯಾರ್ಥಿ ನಿಲಯದ ಒಳಗೆ ಊಟದ ಹಾಲ್‌ನಲ್ಲಿ ಬಂಡೆಗಳು ಹಾಸಿದ್ದು ಕಲ್ಲು ಬಂಡೆಗಳ ಮೇಲೆ ವಿದ್ಯಾರ್ಥಿಗಳು ತಿಂಡಿ, ಊಟ ಮಾಡಬೇಕು.ಅಡಿಗೆ ಭಟ್ಟರು ಸೇರಿದಂತೆ ಒಟ್ಟಾರೆ ಇಲ್ಲಿ ಶುಚಿತ್ವವಿಲ್ಲ,ಅಡುಗೆ ಕೋಣೆ ಗಲೀಜಿನಿಂದ ಕೂಡಿದೆ. ನಿತ್ಯ ತಿಂಡಿ ಮತ್ತು ಸಾಂಬರಗೆ ಬಳಸುವ ಎಣ್ಣೆ ಹಾಗೂ ಇತರೆ ಪದಾರ್ಥಗಳು ಕಳ ದರ್ಜೆಯ ಪದಾರ್ಥಗಳು ಬಳಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಈ ಸಂಬಂಧ ತಹಸೀಲ್ದಾರ್ ಮಹಮ್ಮದ್ ಆಲ್ತಪ್‌ಪಾಷ ಮತ್ತು ತಾಪಂ ಇಒ ರಂಗನಾಥ್‌ಗೆ ದೂರು ಸಲ್ಲಿಸಿದರು.
ನಿಲಯ ಪಾಲಕ ತರಾಟೆಗೆ: ಹಾಸ್ಟೆಲ್ ವಿದ್ಯಾರ್ಥಿಗಳ ಪರಿಸ್ಥಿತಿಯ ಬಗ್ಗೆ ಅವಲೋಕಿಸಿದ ತಹಸೀಲ್ದಾರ್  ನಿಲಯ ಪಾಲಕರ ರಾಧಕೃಷ್ಣರನ್ನು ಸ್ಥಳಕ್ಕೆ ಕರೆಸಿ ವ್ಯವಸ್ಥೆ ಸುಧಾರಿಸುವಂತೆ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement