ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಣಿಗಲ್‌ನಲ್ಲಿ ಶೇ.55 ಮತದಾನ

Vishwanath S
Updated On : 22 Aug 2013, 12:36 pm

ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ಮತದಾನ ತೀರಾ ಸಪ್ಪೆ ಎನ್ನಿಸುವಂತಾಯಿತಲ್ಲದೆ ಬೆಳಗಿನಿಂದಲೂ ಬಹುತೇಕ ಎಲ್ಲಾ ಮತಗಟ್ಟೆಗಳ ಬಳಿ ಆಗಮಿಸಲು ಮತದಾರರ ಅಷ್ಟೇನು ಉತ್ಸಾಹ ತೋರದ ಕಾರಣ ನೀರಸ ವಾತವರಣ ಇತ್ತು.
ಈ ನಿಟ್ಟಿನಲ್ಲಿ ಸಂಜೆ ಐದು ಗಂಟೆ ಮತದಾನ ಮುಕ್ತಾಯಗೊಳ್ಳುವ ವೇಳೆಗೆ ಸರಾಸರಿ ಪ್ರಾಥಮಿಕ ವರದಿಗಳ ಪ್ರಕಾರ ಶೇ.55ರಷ್ಟು ಮತದಾನ ಆಗಿದೆ.
ಮತದಾನ ಪ್ರಾರಂಭಕ್ಕೆ ಮುನ್ನ ತರೇದಕುಪ್ಪೆ ಗ್ರಾಮದಲ್ಲಿ ಇವಿಎಂ ಯಂತ್ರ ಕೈಕೊಟ್ಟರೆ ತಕ್ಷಣವೆ ಅಧಿಕಾರಿಗಳು ತೆರಳಿ ಕೆಲವೆ ಕ್ಷಣಗಳಲ್ಲಿ ಸರಿಪಡಿಸಿದರು. ಚನ್ನಾಪುರ ಗ್ರಾಮದಲ್ಲಿ ಜಮೀನು ದಾಖಲೆಗಳಿಗಾಗಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರೆ, ಉಪವಿಭಾಗಾಧಿಕಾರಿ ನಕುಲ್ ಗ್ರಾಮಕ್ಕೆ ತೆರಳಿ ಸಮಸ್ಯೆ ಬಗೆಹರಿಸಿ ಮತಾದನ ಯಶಸ್ವಿಯಾಗುವಂತೆ ಮಾಡಿದರು. ಇನ್ನು ಸಂಜೆ ಐದು ಗಂಟೆ ನಂತರವೂ ಚೌಡಮ್ಮನ ಗುಡಿ ಸಮೀಪದ ಹೊಸಕೆರೆ ಗ್ರಾಮದ ಮತಗಟ್ಟೆಗೆ ಹೆಚ್ಚಿನ ಮತದಾರರು ಆಗಮಿಸಿದ ಕಾರಣ, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ಮತಗಟ್ಟೆ ಅಧಿಕಾರಿ ಅಸ್ವಸ್ಥ: ಸೀನಪ್ಪನಹಳ್ಳಿ ಸಮೀಪದ ಮತಗಟ್ಟೆಯೊಂದರಲ್ಲಿ ಸಹಾಯಕ ಮತಗಟ್ಟೆ ಅಧಿಕಾರಿ ಗೋವಿಂದಯ್ಯ ಎಂಬುವವರು ಅಸ್ವಸ್ಥರಾದ ಕಾರಣ, ಕೂಡಲೆ 108 ವಾಹನ ಸಿಬ್ಬಂದಿ ತೆರಳಿ, ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.  
ಬೆಳಗಿನಿಂದಲೂ ಪಟ್ಟಣ ಸೇರಿದಂತೆ ತಾಲೂಕಿನಾ ದ್ಯಂತ ಮೂಡಕವಿದ ವಾತವರಣ ನಿರ್ಮಾಣವಾಗಿದ್ದು, ಸಂಜೆ ಮತದಾನ ಅವಧಿ ಪೂರ್ಣಗೊಳ್ಳುವ ವೇಳೆಗೆ ತುಂತುರುಮಳೆ ಸಿಂಚಿನವಾಯಿತು, ಸಂಜೆ ಐದು ಗಂಟೆ ಮತದಾನ ಮುಕ್ತಾಯಗೊಳ್ಳುವ ವೇಳೆಗೆ ಸರಾಸರಿ ಪ್ರಾಥಮಿಕ ವರದಿಗಳ ಪ್ರಕಾರ ಶೇ.55ರಷ್ಟು ಮತದಾನ ಆಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement