ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಮಸ್ಥರಿಂದ ಷರತ್ತಿನ ಮತದಾನ

Vishwanath S
Updated On : 22 Aug 2013, 12:37 pm

ಕ.ಪ್ರ.ವಾರ್ತೆ , ಕುಣಿಗಲ್ಣ್  ಆ.21
ಕಳೆದ ಆರು ದಶಕಗಳಿಂದ ಬಗೆಹರಿಯದ ತಮ್ಮ ಗ್ರಾಮದ ಜಮೀನು ದಾಖಲೆಗಳ ಸಮಸ್ಯೆಯನ್ನು ಕಂದಾಯ ಇಲಾಖಾಧಿಕಾರಿಗಳು ಬಗೆಹರಿಸುವತನಕ ಯಾವುದೇ ಕಾರಣಕ್ಕೂ ಮತದಾನದಲ್ಲಿ ಪಾಲ್ಗೊಳ್ಳದೆ, ಸಾಮೂಹಿಕ ಬಹಿಷ್ಕಾರ ಹಾಕುವುದಾಗಿ ತಾಲೂಕಿನ ಚನ್ನಾಪುರ ಸುತ್ತಮುತ್ತಲ ಗ್ರಾಮಸ್ಥರು ಬುಧವಾರ ನಡೆದ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಬಹಿಷ್ಕರಿಸಿದ ಕಾರಣ, ಉಪವಿಭಾಗಾಧಿಕಾರಿಗಳು ಗ್ರಾಮಕ್ಕೆ ತೆರಳಿ ಸಮಸ್ಯೆಬಗೆಹರಿಸುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ತರು ಮತದಾನದಲ್ಲಿ ಪಾಲ್ಗೊಂಡ ಘಟನೆ ನಡೆಯಿತು.
 ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭದ ಸಮಯಕ್ಕೆ ಚನ್ನಾಪುರ, ಕೆಂಬಾರೆಪಾಳ್ಯ, ಹುಸೇನ್‌ಸಾಬ್ ಪಾಳ್ಯ, ಮತ್ತು ಬೊಮ್ಮಯ್ಯನಪಾಳ್ಯ ಗ್ರಾಮದ ಪ್ರಮುಖರು, ಚನ್ನಾಪುರ  ಗ್ರಾಮದ ಪ್ರವೇಶ ದ್ವಾರದಲ್ಲಿ ಮೂಲಭೂತಹಕ್ಕಿಗಾಗಿ ಸಾಮೂಹಿಕ ಮತದಾನ ಬಹಿಷ್ಕಾರವೆಂಬ ಬ್ಯಾನರ್ ಕಟ್ಟಿ ಮತದಾನ ಬಹಿಷ್ಕರಿಸಿ ಸಮೀಪದ ಕಿರಿಯ ಪ್ರಾಥಮಿಕಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಿಂದ ದೂರ ಉಳಿದರು.
 ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿರುವ ವಿಶಯ ತಿಳಿದು, ಸಿಪಿಐ ಧಮೇಂದ್ರ, ಪಿಎಸೈ ಗುರುಪ್ರಸಾದ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಅವಲೋಕಿಸಿ, ಮೇಲಾಧಿಕಾರಿಗಳಿಗ ವರದಿ ಸಲ್ಲಿಸಿದರು.
 ತುಮಕೂರು ಉಪ ವಿಭಾಗಾಧಿಕಾರಿ ನಕುಲ್, ತಹಸೀಲ್ದಾರ್ ಜಗದೀಶ್, ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚೆನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಈ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಮೇರೆಗೆ ಗ್ರಾಮಸ್ಥರು ಇನ್ನೆರಡು ತಿಂಗಳೊಳಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿ, ಮುಂದೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement