11 ನ್ಯಾಯಬೆಲೆ ಅಂಗಡಿಪರವಾನಗಿ ಅಮಾನತು
ತುಮಕೂರು: ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿ ಮತ್ತು ಗೋಧಿಯನ್ನು ಪಡಿತರ ಚೀಟಿದಾರರಿಗೆ ನಿಗದಿಪಡಿಸಿದ ಪ್ರಮಾಣ ಮತ್ತು ನಿಗದಿಪಡಿಸಿದ ದರದಲ್ಲಿ ವಿತರಿಸುವಲ್ಲಿ ನ್ಯೂನತೆ ಎಸಗಿದ ಜಿಲ್ಲೆಯ ಈ ಕೆಳಕಾಣಿಸಿದ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅಮಾನತುಗೊಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯಾದ ತುರುವೇಕೆರೆ ತಾಲೂಕು ಮೀನು ಸಾಗಾಣಿಕೆ ಹಾಗೂ ಉತ್ಪಾದಕರ ಸಹಕಾರ ಸಂಘ, ಮಲ್ಲಾಘಟ್ಟ ಗ್ರಾಮ., ಶಿರಾ ತಾಲೂಕಿನ ಕೆ.ವಿಶ್ವನಾಥ, ರಂಗನಾಥಪುರ, ಶಿರಾ ಪಟ್ಟಣ. ಬಾಲಾಜಿಸಿಂಗ್, ವಡ್ಡನಹಳ್ಳಿ ಗ್ರಾಮ. ಪಿ.ಬಿ.ಕೃಷ್ಣೇಗೌಡ, ಮಾನಂಗಿ ಗ್ರಾಮ. ಮಂಜುನಾಥಪ್ಪ, ಶಿರಾ ಪಟ್ಟಣ. ಕುಣಿಗಲ್ ತಾಲೂಕಿನ ರತ್ನಮ್ಮ, ಹಳೇಪೇಟೆ, ಹುಲಿಯೂರುದುರ್ಗ, ಸುಮಿತ್ರಮ್ಮ, ಹೊನ್ನೇನಹಳ್ಳಿ ಗ್ರಾಮ. ಶ್ರೀ ಲಕ್ಷ್ಮೀದೇವಿ ಮಹಿಳಾ ಸಮಾಜ, ಸೊಂದಲಗೇರಿ ಗ್ರಾಮ.
ಕೊರಟಗೆರೆ ತಾಲೂಕಿನ ವಿ.ಎಸ್.ಎಸ್.ಎನ್. ಸಿಂಗ್ರಿಹಳ್ಳಿ ಗ್ರಾಮ. ಇನಾಯತ್ ಉಲ್ಲಾ ಖಾನ್, ಮಾದವಾರ ಗ್ರಾಮ. ಪಾವಗಡ ತಾಲೂಕಿನ ಡಿ.ಹೆಚ್. ನಾಗರಾಜು, ದಳವಾಯಿಹಳ್ಳಿ ಗ್ರಾಮ. ಚಿಲ್ಲರೆ ಸೀಮೆಎಣ್ಣೆ ಪರವಾನಗಿದಾರರಾದ ಪಿ.ಎಸ್. ಸುಬ್ರಹ್ಮಣ್ಯ, ಚನ್ನಕೇಶವಪುರ ಗ್ರಾಮ.