ಪಾರ್ಥೇನಿಯಂ ಜಾಗೃತಿ ಸಪ್ತಾಹ, ನಿಯಂತ್ರಣ ಪ್ರಾತ್ಯಕ್ಷಿಕೆ: ಡಾ. ಸುಜಿತ್
ತಿಪಟೂರು: ತಾಲೂಕಿನ ಕೊನೇಹಳ್ಳಿ ಬಿದರೆಗುಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆ ನಿರ್ವಹಣಾ ವಿಭಾಗ, ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ವತಿಯಿಂದ ಪಾರ್ಥೇನಿಯಂ ನಿಯಂತ್ರಣದ ಕುರಿತು ಜಾಗೃತಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಸಂಯೋಜಕರಾದ ಡಾ.ಜಿ.ಎಂ.ಸುಜಿತ್ ಉದ್ಘಾಟಿಸಿ ಪಾರ್ಥೇನಿಯಂ ಜಾಗೃತಿ ಸಪ್ತಾಹದ ಪ್ರಾಮುಖ್ಯತೆ ಹಾಗೂ ಕಳೆದ ನಿಯಂತ್ರಣದ ಕುರಿತು ವಿವರಿಸಿದರು.
ಬೆಂಗಳೂರು ವಿಭಾಗದ ಕಳೆ ನಿರ್ವಹಣಾ ವಿಜ್ಞಾನಿಗಳಾದ ಡಾ.ದೇವೇಂದ್ರ ಮತ್ತು ಡಾ.ಸುಜಯ್ ಪಾರ್ಥೇನಿಯಂ ಕಳೆಯ ನಿಯಂತ್ರಣದ ಕುರಿತು ವಿವರಿಸುತ್ತ, ಇಂತಹ ಮಾರಕ ಕಳೆಯನ್ನು ಹತೋಟಿ ಮಾಡುವುದು ಬಹಳ ಮುಖ್ಯ. ಭೌತಿಕ, ಜೈವಿಕ ಹಾಗೂ ರಾಸಾಯನಿಕವಾಗಿ ಈ ಕಳೆಯನ್ನು ನಿಯಂತ್ರಣ ಮಾಡುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ.ಹೆಚ್.ಎಸ್.ಮಮತಾ, ಡಾ.ಶ್ರೀನಿವಾಸರೆಡ್ಡಿ, ಡಾ.ನಾಗಪ್ಪದೇಸಾಯಿ, ಡಾ.ಬಿ.ಮಮತಾ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು. ಕೇಂದ್ರ ಕೃಷಿ ವಿಸ್ತರಣೆ ವಿಷಯ ತಜ್ಞ ಡಾ.ಶಂಕರ ಸ್ವಾಗತಿಸಿ, ವಂದಿಸಿದರು.