ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಮಹಾಕಾವ್ಯ ಜನಾಂಗದ ಪ್ರಜ್ಞೆಯ ಪ್ರತೀಕ'

Vishwanath S
Updated On : 26 Aug 2013, 12:36 pm

ತುಮಕೂರು: ಮಹಾಕಾವ್ಯಗಳು ಆಯಾ ಜನಾಂಗಗಳ ಪ್ರಜ್ಞೆಯ ಪ್ರತೀಕಗಳೆಂದು ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಪಾದ ಭಟ್ ಅಭಿಪ್ರಾಯಪಟ್ಟರು.
ವಿ.ವಿ ಕಲಾ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆಯ ಮಹಾಕಾವ್ಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಮಹಾಕಾವ್ಯಗಳು ಆಯಾ ಕಾಲದ ಸಾಂಸ್ಕೃತಿಕ ಸಮೃದ್ಧಿಯ ಫಲಗಳು.
ಜಗತ್ತಿನಲ್ಲಿ ಅತ್ಯಧಿಕ ಮಹಾಕಾವ್ಯಗಳನ್ನು ಹೊಂದಿರುವ ಹಿರಿಮೆ ಕನ್ನಡ ಸಾಹಿತ್ಯಕ್ಕಿದೆ. ಇದಕ್ಕೆ ಕಾರಣ ಕನ್ನಡ ನಾಡು ಸಾಂಸ್ಕೃತಿಕ ಸಮೃದ್ಧಿಯನ್ನು ಪಡೆದಿರುವುದೇ ಆಗಿದೆ.  ಮನುಷ್ಯನೊಂದಿಗೆ ಹುಟ್ಟಿದ ಮಹಾಕಾವ್ಯಗಳಲ್ಲಿ ಮಾನವ ಸ್ವಭಾವಗಳ ಮನೋಲೋಕದ ವ್ಯಾಪಾರ ಚಿತ್ರಣಗಳಿವೆ.  
ಮನುಷ್ಯನ ಜೀವನಕ್ರಮ ಬದಲಾದರೂ ಮೂಲ ಸ್ವಭಾವಗಳು ಹಾಗೇ ಇವೆ.  ಒಳಿತು ಕೆಡಕುಗಳ, ಮನುಷ್ಯನ ಆಂತರಿಕ ಸ್ವಭಾವಗಳ ಘರ್ಷಣೆ ವರ್ಣಿಸುವ ಮಹಾಕಾವ್ಯಗಳು ಮನುಕುಲ ಇರುವವರೆವಿಗೂ ಪ್ರಸ್ತುತವಾಗುತ್ತವೆ ಎಂದರು.
ಜನಮನ ಸೂರೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಬಿ. ಕರಿಯಣ್ಣನವರು ಮಲೆಮಹದೇಶ್ವರ ಮಹಾಕಾವ್ಯದ ಸಂಕಮ್ಮ, ಜುಂಜಪ್ಪ ಮಹಾಕಾವ್ಯದ ಚಿನ್ನಮ್ಮರ ಸಂಕಷ್ಟಕರ ಸತ್ವ ಪರೀಕ್ಷೆಗಳ ಮುಂದೆ
ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲ ಟಿ.ಎನ್. ಹರಿಪ್ರಸಾದ್ ಅವರು ಉಪಸ್ಥಿತರಿದ್ದರು. ವೆಂಕಟರೆಡ್ಡಿ ರಾಮರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಾಪಕ ಡಾ. ಎಸ್. ಶಿವಣ್ಣ, ರೇಣುಕಾ ಎಚ್.ಆರ್, ಕೆ.ವಿ. ಪದ್ಮನಾಭ್,  ಸಿ.ಎಂ. ರವಿ ಉಪಸ್ಥಿತರಿದ್ದರು.  ತ್ರಿವೇಣಿ ಸ್ವಾಗತಿಸಿದರೆ, ದಿಲ್ಷಾದ್ ಭಾನು ವಂದಿಸಿದರು.  ಮಂಜುನಾಥ್ ನಿರೂಪಿಸಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement