ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಘಗಳ ಬಲವರ್ಧನೆಗೆ ಪ್ರೊ.ವೈದ್ಯನಾಥನ್ ವರದಿ ಪೂರಕ: ಟಿ.ಪಿ. ಉಮಾಶಂಕರ್

Vishwanath S
Updated On : 27 Aug 2013, 1:01 am

ಕ.ಪ್ರ.ವಾರ್ತೆ ,  ತಿಪಟೂರು ,  ಆ.26
ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಪ್ರೊ.ವೈದ್ಯನಾಥನ್ ವರದಿ ಪೂರಕವಾಗಿದ್ದು, ಆಡಳಿತ ಮಂಡಳಿಯ ನಿರ್ದೇಶಕರು  ಸಂಘಗಳ ಬೆಳವಣಿಗೆಗೆ ಪ್ರಾಮಾಣಿಕವಾಗಿ ತಮ್ಮನ್ನು ತಾವು  ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಸಹಕಾರ ಬ್ಯಾಂಕಿನ ತಿಪಟೂರು ಶಾಖೆಯ ಮೇಲ್ವಿಚಾರಕ ಟಿ.ಪಿ.ಉಮಾಶಂಕರ್ ತಿಳಿಸಿದರು.
ತಾಲೂಕಿನ ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ನವೀಕರಣ ಕಟ್ಟಡದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಘಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಆರ್ಥಿಕವಾಗಿ ಸದೃಢವಾಗುವಂತೆ ಕರೆ ನೀಡಿದರು.
ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ದೇವರಾಜು ಮಾತನಾಡಿ ಪ್ರೊ.ವೈದ್ಯನಾಥನ್ ವರದಿ ಅನುಷ್ಠಾನದಿಂದ ಸಹಕಾರಿ ಸಂಘಗಳು ಉತ್ತಮ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಸರ್ಕಾರಿ ಆಡಳಿತ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದ ಕಾರಣ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹಾಗೂ ಸಂಘಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಈ ವರದಿ ಅನುಕೂಲಕರ. ಆದ್ದರಿಂದ ಸಹಕಾರಿ ಸಂಘಗಳು ರೈತರ ಕೃಷಿ ಉಪಕಸುಬು ಹಾಗೂ ಅವರ ಆರ್ಥಿಕ ಸುಧಾರಣೆಗೆ ಹೆಚ್ಚಿನ ಸಹಕಾರ ನೀಡಬೇಕೆಂದು ತಿಳಿಸಿದರು. ತಾ.ಪಂ.ಸದಸ್ಯ ರಾಮಯ್ಯ, ಸಂಘದ ನಿರ್ದೇಶಕ ಶಿವಮೂರ್ತಿ, ಕೆ.ಬಸವರಾಜು, ಈರಣ್ಣ, ಮಲ್ಲೇಶಯ್ಯ ಸೇರಿದಂತೆ ಸಂಘದ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  ಸಂಘದ ಕಾರ್ಯನಿರ್ವಾಹಕ ರಾಜಣ್ಣ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement