ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗೋಡೇಕೆರೆ ಶ್ರೀಸಿದ್ದರಾಮೇಶ್ವರನಿಗೆ ಕುಂಬಾಭಿಷೇಕ

Vishwanath S
Updated On : 31 Aug 2013, 12:24 pm

ಚಿಕ್ಕನಾಯಕನಹಳ್ಳಿ: ತಾಲೂಕಿನ ಭೂಸುಕ್ಷೇತ್ರ ಗೋಡೇಕೆರೆ ಶ್ರೀಸಿದ್ದರಾಮೇಶ್ವರ ಸ್ವಾಮಿಗೆ ಕುಂಭಾಭಿಷೇಕ  ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಭಕ್ತಮಂಡಳಿ ತಿಳಿಸಿದೆ.
ಸೆ.1  ಭಾನುವಾರದಿಂದ 2ನೇ ಸೋಮುವಾರದವರಗೆ ನಡೆಯುವ ಈ ಪೂಜಾ ವಿಧಿವಿಧಾನ ಕಾರ್ಯಕ್ರಮಗಳ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ವೀರಸಿಂಹಾನಾಧೀಶ್ವರ 1108 ಜಗದ್ಗುರು ಶ್ರೀಸಿದ್ದರಾಮದೇಶೀ ಕೇಂದ್ರ ಮಹಾಸ್ವಾಮಿಗಳು ಸ್ಥಿರಪಟ್ಟಾಧ್ಯಕ್ಷರು ಹಾಗೂ ಶ್ರೀಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮಿಗಳು ಚರಪಟ್ಟಾಧ್ಯಕ್ಷರು ವಹಿಸಲಿದ್ದು, ಸಂಸದ ಜಿ.ಎಸ್.ಬಸವರಾಜು ಅವರ ಸಮ್ಮುಖದಲ್ಲಿ ಲೋಕಲ್ಯಾಣಾರ್ಥವಾಗಿ ಹಾಗೂ ಅನಾವೃಷ್ಟಿ ನಿವಾರಣೆಗಾಗಿಯೂ ಶ್ರೀಕ್ಷೇತ್ರನಾಥ ಶ್ರೀಗುರುಸಿದ್ದರಾಮೇಶ್ವರ ಸ್ವಾಮಿಗೂ, ಶ್ರೀಗಂಗಾಮಾತೆ, ಶ್ರೀವೀರಭದ್ರ ಸ್ವಾಮಿಗೂ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾರುದ್ರಾಭಿಷೇಕ, ಕುಂಬಾಭಿಷೇಕ, ಸಹಸ್ರನಾಮ ಮಹೋತ್ಸವ ನೆರವೇರಲಿದೆ. ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ರುದ್ರಪಠಣ, ಪೂರ್ವಕವಾಗಿ ಶ್ರೀಸ್ವಾಮಿ ಉತ್ಸವದೊಂದಿಗೆ ದೇವಾಲಯ ಪ್ರವೇಶ. ನಂತರ ರಾತ್ರಿ ಕಲಶ ಪೂಜಾದಿಗಳ ಸಿದ್ಧತಾಕಾರ್ಯ ನಂತರ, ರಾತ್ರಿ 3.00ಗಂಟೆಗೆ  ಕಲಶ ಪೂಜೆಯೊಂದಿಗೆ ಮಹಾರುದ್ರಾಭಿಷೇಕ, ಕುಂಬಾಭಿಷೇಕ, ಸಹರ್ಸ ನಾಮಾರ್ಚನೆ ಮಹಾಮಂಗಳಾರತಿ ನೆರವೇರುತ್ತದೆ.
ಸೋಮವಾರ ಮಧ್ಯಾಹ್ನ ಬಂದಂತಹ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement