ಪರಿಸರದ ಸೂಚಕ ಕಪ್ಪೆ: ಯುವ ವಿಜ್ಞಾನಿ ಡಾ.ದಿನೇಶ್
ಕ.ಪ್ರ.ವಾರ್ತೆ , ತುಮಕೂರು , ಆ.30
ಪರಿಸರದ ಆಗು ಹೋಗುಗಳ ಬಗ್ಗೆ ಉಭಯವಾಸಿಗಳಾದ ಕಪ್ಪೆಗಳು ಸೂಚಕಗಳಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿ ಡಾ.ಕೆ.ಪಿ.ದಿನೇಶ್ ತಿಳಿಸಿದ್ದಾರೆ.
ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಜೀವ ವಿಜ್ಞಾನ ವೇದಿಕೆ ವತಿಯಿಂದ ಇತ್ತೀಚೆಗೆ ಉಭಯವಾಸಿ ತಳಿಗಳ ಸೂಚಕಗಳ ಬಗ್ಗೆ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಸುಮಾರು 378 ಕ್ಕೂ ಹೆಚ್ಚು ಕಪ್ಪೆ ತಳಿಗಳಿದ್ದು, ಇದರಲ್ಲಿ ಕೇವಲ 6 ರಿಂದ 7 ತಳಿಗಳು
ತುಮಕೂರು ಜಿಲ್ಲೆಯಲ್ಲಿವೆ. ಇನ್ನೂ ಉಳಿದ 120 ಕಪ್ಪೆ ತಳಿಗಳು ಪಶ್ಚಿಮ ಘಟಕ್ಕೆ ಸೀಮಿತವಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಕಪ್ಪೆ ತಳಿಗಳು ಅಳಿವಿನ ಹಂಚಿನಲ್ಲಿವೆ. ಇವುಗಳನ್ನು ರಕ್ಷಿಸುವುದು ಎಲ್ಲಾ ಮಾನವರ ಕರ್ತವ್ಯವಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಬೆಟ್ಟ, ಗುಡ್ಡ ಮತ್ತು ಅರಣ್ಯಗಳಿದ್ದು, ಇಲ್ಲಿ ಜ್ವಾಲಾಮುಖಿಗಳ ಲಾವರಸದಿಂದ ಕಪ್ಪೆಗಳು ಜೀವಿಸುತ್ತಿವೆ. ಇಂದು ಈ ಬೆಟ್ಟ, ಗುಡ್ಡ ಮತ್ತು ಅರಣ್ಯಗಳು ನಾಶವಾಗಿ ಕಪ್ಪೆಗಳ ಸಂತತಿ ದಿನೇ ದಿನೇ ಕುಸಿಯುತ್ತಿವೆ ಎಂದು ದಿನೇಶ್ ಆತಂಕ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎಲ್. ವೈದ್ಯೇಶ್ವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಪ್ರೊ.ವಿ.ನಳಿನಾಕ್ಷಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಅನಿಲ್‌ಕುಮಾರ, ಸಂಚಾಲಕರಾದ ಸತೀಶ್‌ವರದೇವ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಸಿದ್ದಪ್ಪ, ಉಪನ್ಯಾಸಕ ಕೆ.ಟಿ.ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು.