ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಯರು ಗುಡಿ ಕೈಗಾರಿಕೆಯತ್ತ್ತ ಗಮನ ಹರಿಸಲಿ

Vishwanath S
Updated On : 31 Aug 2013, 12:22 pm

ಕ.ಪ್ರ.ವಾರ್ತೆ , ಕುಣಿಗಲ್ , ಆ. 30
ಗ್ರಾಮಾಂತರ ಪ್ರದೇಶದ ಮಹಿಳೆಯರು ಕೃಷಿ ಚಟುವಟಿಕೆಯ ಜೊತೆಯಲ್ಲಿ ಉಪ ಕಸುಬುಗಳಾದ ಹೈನುಗಾರಿಕೆ, ಗುಡಿ ಕೈಗಾರಿಗೆ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ದೊರೆಯುವ ಗ್ರಾಮೀಣ ಕಚ್ಚಾವಸ್ತುಗಳನ್ನು ಬಳಸಿ ಅಲಂಕಾರಿಕ ವಸ್ತುಗಳ ನಿರ್ಮಾಣದ ಬಗ್ಗೆ ಸೂಕ್ತ ತರಬೇತಿ ಪಡೆದು, ಆರ್ಥಿಕ ಸ್ವಾವಲಂಬಿಗಳಾಗುವಂತೆ ಹುಲಿಯೂರುದುರ್ಗ ಗ್ರಾಪಂ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.
ಗುರುವಾರ, ಹುಲಿಯೂರುದುರ್ಗದ ಸ್ತ್ರೀಶಕ್ತಿ ಭವನದಲ್ಲಿ ಸುಜೀವನ ಒಕ್ಕೂಟ ಮತ್ತು ಜಿಲ್ಲಾ ಜಲಾನಯನ ಇಲಾಖೆ ಸಂಯುಕ್ತಾಶ್ರಯದಲ್ಲಿ ಗ್ರಾಮಾಂತರ ಪ್ರದೇಶದ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಉದ್ಯಮ ಶೀಲತಾ ಜಾಗೃತಿ ಶಿಬಿರದ ಅಂಗವಾಗಿ ಹೈನುಗಾರಿಕೆ, ಗುಡಿಕೈಗಾರಿಕೆ ಸೇರಿದಂತೆ ಅಲಂಕಾರಿಕ ವಸ್ತುಗಳ ತಯಾರಿಕೆಯ ಬಗ್ಗೆ ಹಮ್ಮಿಕೊಳ್ಳಲಾದ ಐವತು ್ತದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಷ್ಟ ಸಾಧ್ಯ: ಪ್ರಸಕ್ತ ದಿನಗಳಲ್ಲಿ ಮಳೆಯನ್ನು ನಂಬಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಿ ರೈತರು, ರೈತಾಪಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಕಷ್ಟ ಸಾಧ್ಯವಾಗಿರುವ ಕಾರಣ, ಖಾಸಗಿ ಸಂಘ, ಸಂಸ್ಥೆಗಳು ಗ್ರಾಮಾಂತರ ಪ್ರದೇಶದ ಮಹಿಳೆಯರಿಗಾಗಿ ಹಮ್ಮಿಕೊಂಡಿರುವ ಇಂತಹ ವಿಶೇಷ ತರಬೇತಿ ಶಿಬಿರದ ಸವಲತ್ತುಗಳನ್ನು ಪಡೆದು, ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳಿಂದ ಅಲಂಕಾರಿಕ ವಸ್ತುಗಳು ಸೇರಿದಂತೆ ಗ್ರಾಮೀಣ ಸೊಗಡಿನ ವಸ್ತುಗಳನ್ನು ತಯಾರಿಸಿ, ನಗರ ಪ್ರದೇಶದ ಮಾರುಕಟ್ಟೆಗೆ ಪೂರೈಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದೆಂದರು.
ಸಾಲ ಸೌಲಭ್ಯ: ಸುಜೀವನ ಒಕ್ಕೂಟದ ದತ್ತಿ ಮಂಡಳಿ ಸದಸ್ಯ ಎಚ್.ಇ.ಶಿವಪ್ಪ, ಒಕ್ಕೂಟವು ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಕೃಷಿ ಚಟುವಟಿಕೆ ಜೊತೆಯಲ್ಲಿ ಉಪಕಸುಬುಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ತರಬೇತಿ ಸೇರಿದಂತೆ ಸಾಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಮಹಿಳೆಯರು ತರಬೇತಿ ಶಿಬಿರದಲ್ಲಿ ವಿವಿಧ ಉತ್ಪನ್ನಗಳ ತಯಾರಿಕೆ ಬಗ್ಗೆ ಅರಿತು, ಕಲಿತು, ನಂತರ ಪರಿಣಾಮಕಾರಿಯಾಗಿ ಅವುಗಳನ್ನು ರೂಪಿಸಿ, ಅನುಷ್ಠಾನ ಗೊಳಿಸಿದಾಗ ನೆಮ್ಮದಿ ಜೀವನ ಸಾಧ್ಯದ ಜೊತೆ, ಆರ್ಥಿಕ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಶಿಬಿರದ ಆಯೋಜಕರಾದ ಎಸ್‌ಆರ್‌ಡಿಒ ಮುಖ್ಯಸ್ಥ ಲೋಕೇಶ್, ಮಂಡಲ ಅಧಿಕಾರಿ ಬಸ್ತಯ್ಯ, ತರಬೇತುದಾರರಾದ ಮಹಾಲಕ್ಷ್ಮೀ, ಪಂಕಜ, ಮಂಜುಳಾ, ಹೇಮಂತ್ ಕುಮಾರ್, ಗ್ರಾಪಂ ಕಾರ್ಯದರ್ಶಿ ಹುಸೇನ್‌ಪೀರ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಹುಲಿಯೂರುದುರ್ಗ ಸುತ್ತಮುತ್ತಲ ಐವತ್ತಕ್ಕೂ ಹೆಚ್ಚು ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement