ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಧಾರ್ಮಿಕ ಸುಧಾರಣಾ ಚಳವಳಿ ಬಾಲ್ಯವಿವಾಹ ತಡೆಗೆ ಒತ್ತು ನೀಡಿದೆ

Rashmi Kasaragodu
Updated On : 2 Dec 2013, 11:38 am

ಚಿಕ್ಕನಾಯಕನಹಳ್ಳಿ: ಇತಿಹಾಸದಲ್ಲಿ ಧಾರ್ಮಿಕ ಸುಧಾರಣಾ  ಚಳವಳಿಗಳು ಬಾಲ್ಯವಿವಾಹ ತಡೆಗೆ  ಹೆಚ್ಚು ಒತ್ತು ನೀಡಿವೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ನುಡಿದರು.
ಅವರು ಪಟ್ಟಣದ ಬಾಲವಿಕಾಸ ಯೋಜನಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ವಿರೋಧಿ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶತಮಾನಗಳು ಇಪ್ಪತ್ತು ಕಳೆದರು ಇನ್ನು ಕೆಲವು ಕಡೆ ಬಾಲ್ಯವಿವಾಹ ಜೀವಂತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಬಾಲ್ಯವಿವಾಹ  ಸೂಕ್ಷ್ಮಸಂವೇದನೆಯ ಹೆಣ್ಣಿನ ದೇಹ ಮತ್ತು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಆಕೆಯ ದೇಹ ಜರ್ಝರಿತವಾಗುತ್ತದೆ. ಹಿಂದೆಲ್ಲಾ 8-10 ಮಕ್ಕಳನ್ನು ಹೆತ್ತರು ತಾಯಂದಿರು ದೃಢಕಾಯರಾಗಿರುತ್ತಿದ್ದರು. ಕಾಲಬದಲಾಗಿದೆ. ಈಗ ನಮ್ಮ ಹೆಣ್ಣು ಮಕ್ಕಳಲ್ಲಿ ಆ ಶಕ್ತಿ ಉಳಿದಿಲ್ಲ. ಆದ್ದರಿಂದ 18ಕ್ಕೆ ಮುಂಚೆ ಯಾವುದೇ ಕಾರಣಕ್ಕೂ ಮದುವೆ ಬೇಡ. ಆದ್ದರಿಂದ ಸಮಾಜದಲ್ಲಿ ಜಾಗೃತಿಯುಂಟುಮಾಡಲು ಪರಿವರ್ತನೆಯ ವಯೋವಾನದಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಬಾಲ್ಯವಿವಾಹದ ಪಿಡುಗನ್ನು ತೊಡೆದು ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಭಾಷಣಕಾರರನ್ನು ತಯಾರು ಮಾಡುವ ಕಾರ್ಯದ ಹೆಜ್ಜೆ ಇದಾಗಿದೆ ಎಂದರು.
ಎಸಿಡಿಪಿಓ ಪರಮೇಶ್ವರಪ್ಪ ಮಾತನಾಡಿ ತಾಲೂಕಿನಲ್ಲಿ ಬಾಲ್ಯವಿವಾಹ ವಿರೋಧಿ ಸಮಿತಿಗಳನ್ನು ತಾಲೂಕು ಮಟ್ಟದಿಂದ ಗ್ರಾಮಪಂಚಾಯ್ತಿ ಮಟ್ಟದವರಗೆ ರಚಿಸಿ ಅದರಲ್ಲಿ ಎಲ್ಲಾ ಹಂತದಲ್ಲಿಯು ನಿಷೇಧಾಧಿಕಾರಿಗಳು ಇರುತ್ತಾರೆ. ಇದರಿಂದ ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕಿ ಪ್ರಮೀಳಾ ಪ್ರಾರ್ಥಿಸಿ, ಮಹದೇವಮ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement