ಮನೆ ಕಳವು ಪ್ರಕರಣ: ಆರೋಪಿಗಳ ಬಂಧನ
ತುಮಕೂರು: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬೀಗ ಹಾಕಿದ್ದ ಮನೆ ಬೀಗ ಒಡೆದು ಸುಮಾರು 12 ಲಕ್ಷ 50 ಸಾವಿರ ರು. ಬೆಲೆ ಬಾಳುವ 141.32 ಗ್ರಾಮ್ ಚಿನ್ನ ಮತ್ತು 11 ಸಾವಿರ ನಗದು ಹಣವನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿ, 17 ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ತುಮಕೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಮ್ಮು ಹಾಗೂ ಮುನಿನಾಯ್ಕ ಬಂಧಿತ ಆರೋಪಿಗಳು. ಈ ಆರೋಪಿಗಳು ನೆಲಹಾಳ್, ಚಿಕ್ಕಸೀಬಿ ಮತ್ತು ತುಮಕೂರು ನಗರದಲ್ಲಿ ಬೀಗ ಹಾಕಿರುವ ಮನೆಗಳ ಬೀಗ ಹೊಡೆದು ಒಳ ಪ್ರವೇಶಿಸಿ ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ. ಬಂಧಿತ ಆರೋಪಿ ಶಮ್ಮುವಿನಿಂದ ಚಿನ್ನದ ಹ್ಯಾಂಗಿಂಗ್ಸ್, ಜೊತೆ ಚಿನ್ನದ ಜುಂಕಿ, ಚಿನ್ನದ ಸಾದಾ ಹ್ಯಾಗಿಂಗ್ಸ್, ಒಂದು ಜೊತೆ ಚಿನ್ನದ ಚಿಕ್ಕ ಓಲೆ, ಒಂದು ಚಿನ್ನದ ಉಂಗುರ, ಒಂದು ಚಿನ್ನದ ನೆಕ್ಲೆಸ್, ಒಂದು ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.