ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲಯನ್ಸ್ನಿಂದ ಹಳ್ಳಿಜನರಿಗೆ ಆರೋಗ್ಯ ಸೇವೆ

Rashmi Kasaragodu
Updated On : 2 Dec 2013, 11:38 am

ಗುಬ್ಬಿ: ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ಹಲವಾರು ಮಹತ್ವ ಪೂರ್ಣ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವ ಲಯನ್ಸ್ ಸಂಸ್ಥೆ ಬಡ ಮತ್ತು ಗ್ರಾಮೀಣ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ರೋಗ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ ಮಹತ್ವದ ಸಾಧನೆ ಮಾಡಿದೆ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಗೌರ್ನರ್ ರಾಮಮೂರ್ತಿ ತಿಳಿಸಿದರು.
ಪಟ್ಟಣದ ಲಯನ್ಸ್ ಸಂಸ್ಥೆಯ ಸಮುದಾಯ ಭವನದ ಪಕ್ಕ  12 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ನೇತ್ರ ತಪಾಸಣಾ ಕೇಂದ್ರದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಗುಬ್ಬಿಯಲ್ಲಿ ಸ್ಥಾಪನೆಯಾಗುವ ಐ ಸ್ಕ್ರೀನಿಂಗ್ ಸೆಂಟರ್ಗೆ ಅತ್ಯಾಧುನಿಕ ಯಂತ್ರೋಪಕರಣವನ್ನು ನೀಡಲಾಗುತ್ತಿದ್ದು, ಈ ಸೆಂಟರ್ ಗ್ರಾಮೀಣ ಭಾಗದ ಬಡ ಜನರಿಗೆ ಅನುಕೂಲವಾಗಬೇಕು ಎಂದ ಅವರು ಆರೋಗ್ಯ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಡಾ.ಮೋದಿ ಕಣ್ಣಿನ ಆಸ್ಪತ್ರೆಯ ಜೊತೆಯಲ್ಲಿ  ಗುಬ್ಬಿ ಮತ್ತು ಚೇಳೂರಿನಲ್ಲಿ ನಡೆಸಲಾಗುತ್ತಿದೆ ಎಂದರು.
ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಲಯನ್ಸ್ ಸಂಸ್ಥೆಯು ಕಾರ್ಡಿಯೋ ಕೇರ್ ಸೆಂಟರ್ಗಳನ್ನು ಪ್ರಾರಂಭಿಸಲಾಗುತ್ತಿದೆ. ಇಂತಹ ಮಹತ್ವದ ಕಾರ್ಯ ನಿರ್ವಹಿಸುವ ಗ್ರಾಮೀಣ ಲಯನ್ಸ್ ಸಂಸ್ಥೆಗೆ ಅಗತ್ಯ ಆರ್ಥಿಕ ನೆರವು ಜಿಲ್ಲಾ ಸಂಸ್ಥೆಯಿಂದ ಒದಗಿಸಲಾಗುವುದು ಎಂದ ಅವರು ವಿದ್ಯುತ್ ವಂಚಿತ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಸೋಲಾರ್ ಲೈಟ್ಗಳನ್ನು ವಿತರಿಸುವ ಕಾರ್ಯ ಲಯನ್ಸ್ ಸಂಸ್ಥೆ ನಡೆಸುತ್ತಿದೆ. ಗುಬ್ಬಿ ಲಯನ್ಸ್ ಸಂಸ್ಥೆವತಿಯಿಂದಲೂ ಸೋಲಾರ್ ಲೈಟ್ಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಗುಬ್ಬಿ ಲಯನ್ಸ್ ಅಧ್ಯಕ್ಷ ಜಿ.ಆರ್.ಶಿವಕುಮಾರ್ ಮಾತನಾಡಿ ಪ್ರತಿ ತಿಂಗಳೂ ನಿರಂತರವಾಗಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳು ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕಾರ್ಯಗಳನ್ನು ನಡೆಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ 5 ಮಂದಿ ಲಯನ್ಸ್ ಸಂಸ್ಥೆಯ ಚಾರಿಟರ್ ಸದಸ್ಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಲಯನ್ಸ್ ಸಂಸ್ಥೆಯ ಖಜಾಂಚಿ ಪಾಂಡುರಂಗ ಗುಪ್ತ, ಜಿಲ್ಲಾ ಕ್ಯಾಬಿನೆಟ್  ಕಾರ್ಯದರ್ಶಿ ಗಣೇಶ್, ರೀಜನಲ್ ಚೇರ್ಮನ್ ಎಂ. ವಿಶ್ವನಾಥ್, ವಲಯ ಚೇರ್ಮನ್ ಶಿವನಂಜಯ್ಯ, , ಪದಾಧಿಕಾರಿಗಳಾದ ಕೆ.ಎಲ್.ಗೋಪಾಲಕೃಷ್ಣಶೆಟ್ಟಿ, ವಿಶ್ವನಾಥ್ ಸಾವಂತ್, ಪಿ.ಎಸ್. ಸುರೇಶಬಾಬು, ಡಿ.ಆರ್.ಕೀರ್ತಿರಾಜ್, ಡಾ.ಕೃಷ್ಣಮೂರ್ತಿ, ಕೆ.ಆರ್. ಅಶೋಕ್ಕುಮಾರ್, ಎಚ್.ಎಸ್. ದಯಾನಂದ, ಸತ್ಯನಾರಾಯಣ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement