ಹಾಡಿನಲ್ಲಿ ಅರ್ಥವಿದೆ, ಮಾನವೀಯ ಮೌಲ್ಯ ಅಡಗಿದೆ
ತುಮಕೂರು: ಹಾಡಿನಲ್ಲಿ ಅರ್ಥವಿದೆ. ಮಾನವೀಯ ಮೌಲ್ಯ ಅಡಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೋಮು ಭಾಸ್ಕರಾಚಾರ್ ಅಭಿಪ್ರಾಯಪಟ್ಟರು.
ಅವರು ತುಮಕೂರು ತಾಲೂಕು ಬೊಮ್ಮನಹಳ್ಳಿ ಸಿದ್ಧಗಿರಿ ಶನೈಶ್ವರ ಟ್ರಸ್ಟ್, ಜಿಲ್ಲಾ ಮತ್ತು ತಾಲೂಕು ಕಸಾಪ, ಭೈರವ ಕಲಾ ಸಂಘದ ಆಶ್ರಯದಲ್ಲಿ ಸದಾಶಿವನಗರದಲ್ಲಿ ಭಕ್ತಿಗೀತೆ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಹಳ್ಳಿಯ ಸೊಗಡಿನಲ್ಲಿ ಶ್ರೀ ಭೈರವ ಕಲಾ ಸಂಘ ಇಂತಹ ವಿನೂತನವಾದ ಭಕ್ತಿಗೀತೆ ನಡೆಸುತ್ತಿರುವುದು ಹಳ್ಳಿಗಾಡಿನ ಸೊಗಡನ್ನು ಪ್ರತಿಬಿಂಬಿಸುತ್ತದೆ ಎಂದರು.
ಇಷ್ಟು ಜನ ಕಲಾವಿದರನ್ನು ಒಂದುಗೂಡಿಸಿ ಮನೋಜ್ಞ ಕಾರ್ಯಕ್ರಮ ನೀಡುತ್ತಿರುವುದಕ್ಕೆ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷ ಹಾಗೂ ನ್ಯಾಯವಾದಿ ರವೀಂದ್ರನಾಥ ಠಾಗೂರ್ ಮಾತನಾಡಿ ಇಂತಹ ಪುಣ್ಯ ಸ್ಥಳಗಳಿಗೆ ಭಕ್ತ ಸಮೂಹದವರು ಬಂದು ಹೋಗುವುದು ಒಳ್ಳೆಯದು ಎಂದರು.ಭಕ್ತಿ ಗೀತೆಗಳು ಭಕ್ತಿರಸವನ್ನು ಹರಿಸುತ್ತದೆ. ಹೃದಯ ತುಂಬಿ ಹಾಡುವ ಕಲಾವಿದರು ಈ ಸಂಘದಲ್ಲಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕೆಂಬಾಳ ರೇಣುಕಯ್ಯ ಮಾತನಾಡಿ ಪುಟ್ಟಬೋರಯ್ಯನವರು ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಅಲ್ಲದೇ ರಂಗಭೂಮಿಯಲ್ಲಿ ಕೌಶಲ್ಯ ಮೆರೆದಿದ್ದಾರೆ ಎಂದರು.
ಸಂಗೀತ ಕಾರ್ಯಕ್ರಮದಲ್ಲಿ ಕ್ಯಾಶಿಯೋ ಅಶ್ವಥ್ ನಾರಾಯಣ್, ತಬಲ ಯುವರಾಜ್ ಮತ್ತು ರಾಮಕೃಷ್ಣ, ತಾಳವಾದ್ಯ ಶ್ರೀನಿವಾಸ್, ಹಾಡುಗಾರಿಕೆ ಪಾರ್ವತಮ್ಮ, ನಾಗಲಕ್ಷ್ಮಮ್ಮ, ಸಿದ್ಧಗಂಗಮ್ಮ, ಎಚ್.ಬಿ. ಪುಟ್ಟಬೋರಯ್ಯ ನವರ ಸಾರಥ್ಯದಲ್ಲಿ ಮೂಡಿ ಬಂತು. ಭೈರವ ಕಲಾ ಸಂಘದ ಕಾರ್ಯದರ್ಶಿ ಹೆಚ್.ಬಿ. ಪುಟ್ಟಬೋರಯ್ಯ ಸ್ವಾಗತಿಸಿದರು. ಜನಾರ್ಧನ್ ವಂದಿಸಿದರು.