ಒಕ್ಕಲಿಗರ ಸಂಘ ಚುನಾವಣಾ ವೇಳಾಪಟ್ಟಿ
ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ತುಮಕೂರು ಜಿಲ್ಲಾ ಕ್ಷೇತ್ರದ ಚುನಾವಣೆ ಜರುಗಲಿದ್ದು, ಚುನಾವಣಾಧಿಕಾರಿಯಾಗಿ ಸಹಕಾರಿ ಸಂಘದ ಉಪನಿಬಂಧಕ ಎಚ್. ಬಾಲಶೇಖರ್ ನೇಮಕಗೊಂಡಿರುತ್ತಾರೆ. ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. ಉಮೇದುವಾರರು ನಾಮಪತ್ರವನ್ನು ಡಿಸೆಂಬರ್ 5 ರಿಂದ ಡಿ.17 ರವರೆಗೆ ಬೆ.11 ಗಂಟೆಯಿಂದ ಮ.3 ರವರೆಗೆ ಜಿಲ್ಲಾ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಅಕ್ರಮ ಮದ್ಯ ಮಾರಾಟ ನಿಲ್ಲಿಸಿ: ಮನವಿ
ಕೊರಟಗೆರೆ: ತಾಲೂಕಿನ ಕಾಮರಾಜನಹಳ್ಳಿ ಹಾಗೂ ಹರಿಹರಪ್ಪನಪಾಳ್ಯದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಪ್ಪಿತಸ್ಥರ ವಿರುದ್ದ ಕಾನೂನುರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಕ್ಕ ಪಕ್ಕದ ನಾಲ್ಕು ಗ್ರಾಮದ ಜನತೆ ತಹಸೀಲ್ದಾರ್ರಿಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿನ ಕಸಬಾ ಹೋಬಳಿಯ ಕಾಮರಾಜನಹಳ್ಳಿ, ಹರಿಹರಪ್ಪನಪಾಳ್ಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಇಲ್ಲಿಂದಲೆ ಹುಲುಗೊನಹಳ್ಳಿ, ಮತ್ತು ಚಿಕ್ಕೆಗೌಡನಹಳ್ಳಿ ಗ್ರಾಮಗಳಿಗೂ ಈ ಮಧ್ಯ ಮಾರಾಟ ನಡೆಯುತ್ತಿದ್ದು ಗ್ರಾಮಗಳಲ್ಲಿ ಶಾಂತಿ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಮರಾಜನಹಳ್ಳಿ ಗ್ರಾಮದಲ್ಲಿ ಶೇ. 98 ರಷ್ಟು ದಲಿತರಿದ್ದು ಈ ಗ್ರಾಮದಲ್ಲಿ ಮೂರು ಮಂದಿ ದಿನದ 24 ಗಂಟೆ ಅವದಿಯೂ ಲೋಕಲ್ ಮದ್ಯ ಮಾರಾಟ ಮಾಡುತ್ತಿದ್ದು ಇದರಿಂದ ಗ್ರಾಮಗಳಲ್ಲಿ ದಿನವೂ ಜಗಳ, ಗಲಾಟೆ ನಡೆಯುತ್ತಿದ್ದು ಕುಡಿತದ ಚಟಕ್ಕೆ ಮಹಿಳೆಯರೂ ಸಹ ಬಲಿಯಾಗಿ ಇದರಿಂದ ಮಕ್ಕಳು ತೊಂದರೆ ಅನುಭವಿಸಿ ಗ್ರಾಮದಲ್ಲಿ ಶಾಂತಿ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಕೌಶಲ್ಯ ತರಬೇತಿ:
ಅರ್ಹತೆ ಸಡಿಲಿಕೆ
ತುಮಕೂರು: ವಾರ್ತಾ ಇಲಾಖೆಯು 2013-14ನೇ ಸಾಲಿನ ಗಿರಿಜನ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಪದವೀಧರರಿಂದ ಕೌಶಲ್ಯ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಅರ್ಹತೆ ಸಡಿಲಗೊಳಿಸಲಾಗಿದೆ. ಅಭ್ಯರ್ಥಿಯು ಪತ್ರಿಕೋದ್ಯಮ, ಸಮೂಹ ಸಂವಹನ, ವಿದ್ಯುನ್ಮಾನ ಮಾಧ್ಯಮ ವಿಷಯದಲ್ಲಿ ಪದವಿ, ಸ್ನಾತಕ ಪದವಿ, ಪಿ.ಜಿ ಡಿಪ್ಲೊಮಾ ಪಡೆದಿರಬೇಕು. ನಿರೂಪಣಾ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಲು ಪತ್ರಿಕೋದ್ಯಮ ಸೇರಿದಂತೆ ಇತರೆ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ಸ್ವವಿವರಗಳೊಂದಿಗೆ, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ಸಂ.17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು 560001 ಈ ಕಚೇರಿಗೆ ಸಲ್ಲಿಸಬೇಕು.
ಉಚಿತ ತರಬೇತಿ
ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಪ್ರವರ್ಗ-1 , 11(ಎ), 111(ಎ), 111(ಬಿ) ಗಳಿಗೆ ಸೇರಿದ ಪಿ.ಯು.ಸಿ. ಪಾಸಾದ ಅರ್ಹ ನಿರುದ್ಯೋಗಿ ಮಹಿಳೆ, ಪುರುಷ ಅಭ್ಯರ್ಥಿಗಳಿಗೆ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಬೆಂಗಳೂರು ಈ ಸಂಸ್ಥೆಯ ಮೂಲಕ 4 ವಿವಿಧ ಕೋರ್ಸ್ಗಳಲ್ಲಿ ಉಚಿತ ತರಬೇತಿಯನ್ನು ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಕಲ್ಪಿಸಲಾಗಿದೆ. ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ತುಮಕೂರು.