ಪತಿ ನೀಡಿದ ಹಿಂಸೆಯಿಂದ ಬೇಸತ್ತ ಮಹಿಳೆ ಆತ್ಮಹತ್ಯೆ
ಕುಣಿಗಲ್: ಪತ್ನಿಯ ಶೀಲ ಶಂಕಿಸಿ ಪತಿ ನೀಡಿದ ಹಿಂಸೆಯಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅವರನ್ನು ಬೆಳ್ಳಾವಿಯ ನರಸಿಂಹಮೂರ್ತಿಯವರ ಮಗಳಾದ ಕಾಂಚನ (20) ಎಂದು ಗುರುತಿಸಲಾಗಿದ್ದು, ಕಳೆದ 9 ತಿಂಗಳ ಹಿಂದೆ ಸಿಎಸ್ಪುರದ ಕಂಬಯ್ಯ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಪದೇ ಪದೇ ಶೀಲಶಂಕಿಸಿ ಮಾತನಾಡುತ್ತಿದ್ದ ಕಾರಣ ಬೇಸತ್ತ ಕಾಂಚನಾ, ಮಾರ್ಕೋನಹಳ್ಳಿ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಅಪರಿಚಿತ ದೇಹವೆಂದು ಪ್ರಕರಣದಾಖಲಿಸಿದ್ದ ಪೊಲೀಸರು ಶವದ ಚಹರೆಯನ್ನು ಇತರೆ ಠಾಣೆಗೆ ರವಾನಿಸಿ, ಶವವನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಿಸಿದ್ದರು. ಸೋಮವಾರದಂದು ಮೃತಳ ಕಡೆಯವರು ನಾಪತ್ತೆ ಪ್ರಕರಣ ದಾಖಲಿಸಲು ಠಾಣೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅಮೃತೂರು ಪಿಎಸೈ ಮಂಜುನಾಥ ಹೂಗಾರ್ ಮುಂದಿನ ಕ್ರಮ ಕೈಗೊಂಡಿದ್ದಾರೆ.