ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಾಮರಸ್ಯದ ಜೀವನ ಪದರಗಳು ನಾಟಕದ ತಿರುಳು

Rashmi Kasaragodu
Updated On : 4 Dec 2013, 12:49 pm


ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರದ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಬೆಂಗಳೂರಿನ ಪ್ರಯೋಗಶೀಲ ಟ್ರಸ್ಟ್ ವತಿಯಿಂದ ಯು.ಗೋವಿಂದೇಗೌಡ ಅವರ ನಿರ್ದೇಶನದಲ್ಲಿ ತುಮಕೂರು ಶಿವಕುಮಾರ ರಚಿಸಿರುವ ಪದರಗಳು  ನಾಟಕ ಪ್ರದರ್ಶನ ನಡೆಯಿತು.
ವಿಭಿನ್ನ ನಾಟಕಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ರಂಗದ ಮೇಲೆ ತರುವ ಪ್ರಯತ್ನ ನಡೆಸುತ್ತಿರುವ ಪ್ರಯೋಗಶೀಲ ಟ್ರಸ್ಟ್, ಹರಪ್ಪನಹಳ್ಳಿ, ಹಾವೇರಿ, ಚಿತ್ರದುರ್ಗ ಮತ್ತು ಕೊಪ್ಪಳದಲ್ಲಿ ಈ ನಾಟಕ ಪ್ರದರ್ಶನಗೊಂಡಿದ್ದು, ಐದನೇ ಪ್ರಯೋಗವಾಗಿ ತುಮಕೂರಿನ ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಪ್ರದರ್ಶನಗೊಂಡಿತು. ಪದರಗಳು ನಾಟಕ ಅಧುನಿಕತೆ ಮತ್ತು ವಿಲಾಸಿ ಜೀವನ ಗಂಡು-ಹೆಣ್ಣಿನ ನಡುವೆ ಹೇಗೆ ಕಂದಕಗಳನ್ನು,ಅನುಮಾನ ಮತ್ತು ಬಿಗುಮಾನಗಳನ್ನು ಹೆಚ್ಚಿಸುತ್ತಾ ದಾಂಪತ್ಯವೆಂಬ ಸಾಮಾಜಿಕ ಕಟ್ಟಳೆಯನ್ನು ಒಡೆಯುತ್ತಾ ಮನುಷ್ಯನನ್ನು ಒಬ್ಬಂಟಿಯನ್ನಾಗಿಸುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತದೆ.ಅಲ್ಲದೆ ಅಹಮಹಿಮಿಕೆಯಿಂದ ಹೊರಬಂದು ಹೊಂದಾಣಿಕೆಯಾದ ಜೀವನ ನಡೆಸಿದರೆ ಜೀವನದಲ್ಲಿ ಗೆಲವು ಪಡೆಯಬಹುದು ಎಂಬುದನ್ನು ನಾಟಕ ತೋರಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement