ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುಧಾರಿತ ಬೇಸಾಯ ಕ್ರಮಗಳ ಪ್ರಾತ್ಯಕ್ಷಿಕೆ ತರಬೇತಿ

Rashmi Kasaragodu
Updated On : 4 Dec 2013, 12:47 pm

ತಿಪಟೂರು: ತಾಲೂಕಿನ ಬಿದರೆಗುಜಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರವು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘ  ಸಹಯೋಗದಲ್ಲಿ ಡಿ.16ರಿಂದ 21ರವರೆಗೆ ಕೇಂದ್ರದ ಆವರಣದಲ್ಲಿ ತೆಂಗಿನಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಮರ ಹತ್ತುವ ಸಾಧನ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮವನ್ನು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ 35 ವರ್ಷದೊಳಗಿನ 20 ಯುವ ರೈತ ಹಾಗೂ ರೈತ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರತಿದಿನ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದ್ದು, ತರಬೇತಿ ಪಡೆದ ಯುವ ರೈತರ ಹಾಗೂ ರೈತ ಮಹಿಳೆಯರಿಗೆ ಸುಧಾರಿತ ತಂತ್ರಜ್ಞಾನದ ತೆಂಗಿನ ಮರ ಹತ್ತುವ ಸಾಧನವನ್ನು ವಿತರಿಸಲಾಗುವುದು. ಆಸಕ್ತ ಯುವ ರೈತ ಹಾಗೂ ರೈತ ಮಹಿಳೆಯರು ಡಿ.10ರೊಳಗೆ ತಮ್ಮ ಹೆಸರನ್ನು ಕಾರ್ಯಕ್ರಮ ಸಂಯೋಜಕರು 9449866936 ಕೃಷಿ ವಿಜ್ಞಾನ ಕೇಂದ್ರ ಅಥವಾ ವಿಷಯ ತಜ್ಞರು ಕೃಷಿ ವಿಸ್ತರಣೆ 99451948712 ಅಥವಾ ಆಯಾ ತಾಲೂಕಿನ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement