ಕೊರಟಗೆರೆಗೆ ನೀರು ಹರಿಸಲು ಲಾಲ್ ಆಗ್ರಹ
ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರನ್ನು ಹರಿಸುವಂತೆ ಶಾಸಕ ಪಿ.ಆರ್. ಸುಧಾಕರಲಾಲ್ ಆಗ್ರಹಿಸಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶೂನ್ಯ ವೇಳೆಯ ಅವಧಿಯಲ್ಲಿ ಕೊರಟಗೆರೆ ಶಾಸಕ ಸುಧಾಕರ್ಲಾಲ್ ಅವರು ಕ್ಷೇತ್ರದ ವ್ಯಾಪ್ತಿಗೊಳಪಡುವ ಕೊರಟಗೆರೆ ತಾಲೂಕು, ಕೋರ ಹೋಬಳಿ, ಪುರವರ ಹೋಬಳಿಯ ಕೆರೆಗಳಿಗೆ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ನೀರು ಹರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈಗಾಗಲೇ 2005 ರಲ್ಲಿ ಮಂಜೂರಾಗಿರುವ ಯೋಜನೆಯಂತೆ ಕೊರಟಗೆರೆ ಹಾಗೂ ಸುತ್ತಮುತ್ತಲಿನ 18 ಗ್ರಾಮಗಳಿಗೆ, ಕೋರ ಹೋಬಳಿಯ ಬ್ರಹ್ಮಸಂದ್ರ, ಸುತ್ತಮುತ್ತಲ 10 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಪ್ರಯುಕ್ತ ಹೇಮಾವತಿ ನಾಲೆಯಿಂದ ಕ್ಷೇತ್ರದಲ್ಲಿರುವ ಬ್ರಹ್ಮಸಂದ್ರ, ಮಣುವಿನಕುರಿಕೆ, ಕೆಸ್ತೂರು, ತೋವಿನಕೆರೆಗೆ ನೀರು ಬಿಡಲು ಆಗ್ರಹಿಸಿದ್ದಾರೆ.