ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಸ್ವೈ, ಹಿರೇಮಠ್ ಗುಣಗಾನ ಮಾಡಿದ ಸೊಗಡು

Rashmi Kasaragodu
Updated On : 5 Dec 2013, 1:09 am

ತುಮಕೂರು: ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರನ್ನು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಹಾಡಿ ಹೊಗಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ನಾಯಕ. ಇದರಲ್ಲಿ ಎರಡು ಮಾತಿಲ್ಲ. ಅವರ ವಿರುದ್ಧ ಯಾವುದೇ ತಕರಾರಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿಂದೆ ತಾವು ಯಡಿಯೂರಪ್ಪನವರನ್ನು ಟೀಕಿಸಿದ್ದು ನಿಜ. ಜನಾಭಿಪ್ರಾಯ ಹಾಗಿತ್ತು. ಅಂದಿನ ಪರಿಸ್ಥಿತಿಯೂ ಹಾಗೇ ಇತ್ತು. ತಾವೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಈಗ ಕಾಲ ಬದಲಾಗಿದೆ. ಬಿಜೆಪಿಗೆ ಬಿಎಸ್ವೈ ಬರಲು ಪಕ್ಷದ ತಕರಾರಾಗಲೀ ಅಥವಾ ಕಾರ್ಯಕರ್ತರಾಗಲೀ ವಿರೋಧ ವ್ಯಕ್ತಪಡಿಸುತ್ತಿಲ್ಲ. ಈ ಡಿಸೆಂಬರ್ ತಿಂಗಳೊಳಗೆ ಬಿಎಸ್ವೈ ಬರುವುದು ಬಹುತೇಕ ಖಚಿತ ಎಂದು ಸಂತಸ ವ್ಯಕ್ತಪಡಿಸಿದ, ಬಿಎಸ್ವೈ ನಮ್ಮ ನಾಯಕ ಎಂದು ಎರಡೆರಡು ಬಾರಿ ಹೇಳಿದ್ದು ಗಮನಾರ್ಹವಾಗಿತ್ತು.
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ವಿರುದ್ಧ ಕಾಂಗ್ರೆಸ್ ಪಕ್ಷ ಲಘುವಾಗಿ ಮಾತನಾಡುತ್ತಿದೆ ಎಂದು ಸೊಗಡು ವಾಗ್ದಾಳಿ ನಡೆಸಿದರು. ಹಿರೇಮಠ್ ಒಬ್ಬ ಧೈರ್ಯಸ್ಥ. ಅಕ್ರಮ ಗಣಿಗಾರಿಕೆ ಸೇರಿದಂತೆ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾ ಬಂದಿರುವ ಪ್ರಾಮಾಣಿಕ ವ್ಯಕ್ತಿ. ಇಂತವರ ವಿರುದ್ಧ ಯಾರೇ ಆಗಲಿ ಲಘುವಾಗಿ ಮಾತನಾಡುವುದು ಸರಿಯಲ್ಲ. ಅವರಿಗೆ ಜೀವ ಬೆದರಿಕೆಯಿದೆ. ರಕ್ಷಣೆ ಕೊಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಸೊಗಡು ಎಸ್.ಆರ್. ಹಿರೇಮಠ್ ಕುರಿತು ವಕಾಲತ್ತು ವಹಿಸಿ, ಗುಣಗಾನ ಮಾಡಿದರು. ಹಾಗೆಯೇ ತುಮಕೂರಿನಲ್ಲಿ ಸರ್ಕಾರಿ ಜಮೀನು, ಪಾರ್ಕ್ ಸೇರಿದಂತೆ ಒಟ್ಟಾರಿ ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಹೋರಾಟ ಮಾಡುತ್ತಿರುವ ತುಮಕೂರಿನ ಹಿರೇಮಠ್ಗಳ ಪರ, ಅದರಲ್ಲೂ ತಮ್ಮ ಬಿಜೆಪಿ ಪಕ್ಷದಲ್ಲೇ ಇರುವ ಹಿರೇಮಠ್ಗಳ ಪರ ವಿಶೇಷ ಕಾಳಜಿ ವಹಿಸಿ, ಅವರ ಬೆಂಬಲಕ್ಕೆ ನಿಲ್ಲುವುದಾಗಿಯೂ, ಅವರಿಗೆ ರಕ್ಷಣೆ ಒದಗಿಸುವುದಾಗಿಯೂ ಸೊಗಡು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement