ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ವಹಿವಾಟಿಗೆ ಕ್ರಮ

Mainashree
Updated On : 5 Dec 2013, 11:24 am

ಶಿರಾ: ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪರಿಮಿತಿಯೊಳಗೆ ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರವನ್ನು ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ಮಾರುಕಟ್ಟೆ ಪ್ರಾಂಗಣ ಎಂದು ಘೋಷಿಸಿದ್ದಾರೆ.
ಈ ಕೇಂದ್ರದಲ್ಲಿ ವಹಿವಾಟು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಎಂ.ಆರ್. ಶಶಿಧರ ಗೌಡ ತಿಳಿಸಿದರು.  ಅವರು ನಗರದ ಎ.ಪಿ.ಎಂ.ಸಿ. ಮಾರುಕಟ್ಟೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹೂ ಬೆಳೆಗಾರರು ಹಾಗೂ ಖರೀದಿದಾರರು ಸದರಿ ಕೇಂದ್ರದಲ್ಲಿ ಒದಗಿಸಿರುವ ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸುತ್ತ ಇನ್ನು ಮುಂದೆ ರಸ್ತೆ ಬದಿಗಳಲ್ಲಿ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರ ವಹಿವಾಟು ಮಾಡದೆ ಮಾರುಕಟ್ಟೆ ನಿಗದಿಪಡಿಸಿರುವ ಜಾಗದಲ್ಲೆ ವ್ಯಾಪಾರ ಕೈಗೊಳ್ಳಬೇಕು ಹಾಗೂ ಖರೀದಿದಾರರು ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಈ ಕೇಂದ್ರದಲ್ಲಿ ವಹಿವಾಟು ನಡೆಸಲು ಪರವಾನಗೆ ಪಡೆಯಬಹುದು ಎಂದು ತಿಳಿಸಿದರು.
ಶೇಂಗಾ ಖರೀದಿ: ಶಿರಾ ಎಪಿಎಂಸಿ ಪ್ರಾಂಗಣದಲ್ಲಿ ಕರ್ನಾಟಕ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ನ್ಯಾಪೆಡ್ ಏಜೆನ್ಸಿಯಾದ ಕರ್ನಾಟಕ ಎಣ್ಣೆ ಬೀಜಗಳ ನಿಗಮ ವತಿಯಿಂದ ಉತ್ತಮ ಗುಣಮಟ್ಟದ ಸಿಪ್ಪೆ ಸಹಿತ ಶೇಂಗಾ ಕ್ವಿಂಟಲ್‌ಗೆ 4000 ರು.ಗಳಂತೆ ಮತ್ತು ಸೂರ್ಯಕಾಂತಿ ಎಣ್ಣೆ ಬೀಜವನ್ನು 3700 ರು.ನಂತೆ ಖರೀದಿಸಲು, ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ತಾಲೂಕಿನ ಎಲ್ಲಾ ರೈತ ಬಾಂಧವರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಎಪಿಎಂಸಿ ನಿರ್ದೆಶಕರಾದ ದೊರೆಸ್ವಾಮಿ, ಕೆಎಫ್‌ಓ ಅಧಿಕಾರಿಗಳಾದ ಮಹಮದ್ ಮಬೀನ್, ವಿರೂಪಾಕ್ಷಪ್ಪ, ಮುರುಳೀಧರ, ಚನ್ನಕೇಶವ, ಎಪಿಎಂಸಿ ಕಾರ್ಯದರ್ಶಿ ಜಿ. ಜಯರಾಮಯ್ಯ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement