ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾಲೂಕಿನ 7 ಮಸೀದಿಗಳಿಗೆ ಕಾಂಪೌಂಡ್ ಭಾಗ್ಯ

Mainashree
Updated On : 5 Dec 2013, 11:24 am

ತುರುವೇಕೆರೆ: ತಾಲೂಕಿನ 7 ಮಸೀದಿಗಳಿಗೆ ಸರ್ಕಾರ ಕಾಂಪೌಂಡ್ ಭಾಗ್ಯಕ್ಕೆ ಹಸಿರು ನಿಶಾನೆ ತೋರಿದೆ.
ಸರ್ಕಾರ ತಲಾ 1 ಲಕ್ಷ ರು.ಗಳ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆಂದು ಹಣ ಬಿಡುಗಡೆ ಮಾಡಿದೆ. ತಾಲೂಕಿನ ದಂಡಿನಶಿವರ ಹೋಬಳಿಯ ಹಟ್ಟಿಹಳ್ಳಿಯ ಹಜರತ್ ಸೈಯದ್ ಸಂಕಲಿ ಪೀರ್ ಖಾದರ್ ಷವಲಿ ದರ್ಗಾ, ದಬ್ಬೇಘಟ್ಟ ಹೋಬಳಿ ಮುದ್ದನಹಳ್ಳಿಯ ಜಲಾಲ್‌ವುದ್ದೀನ್ ಷಾವಲಿ ದರ್ಗಾ, ಮಾಯಸಂದ್ರ ಹೋಬಳಿ ಜಡೆಯ ಗ್ರಾಮದ ಹಜರತ್ ಸೈಯದ್ ನೂರ್‌ಷಾ ಖಾದರ್ ಜಿಲಾನಿ ದರ್ಗಾ, ನಿಂಬೇಹಳ್ಳಿಯ ಮಸ್ಜಿದ್-ಎ-ಆಹ್ಲೆ ಸುನಾತುಲ್ ಜಮಾತ್‌ಗೆ, ದಬ್ಬೇಘಟ್ಟಾ ಹೋಬಳಿ ಅರೇಹಳ್ಳಿಯ ಹಜರತ್ ಸೈಯದ್ ಮದಾರ ಷಾ ವಲ್ಲಿ ದರ್ಗಾ, ಮಾಯಸಂದ್ರ ಹೋಬಳಿ ದಾಸಿಹಳ್ಳಿಯ ಆಹ್ಲೆ ಸುನ್ನಾತ್‌ಉಲ್ ಜಮಾತ್, ಜುಮ್ಮಾ ಮಸೀದಿ, ಬಾಣಸಂದ್ರದ ಜಾಮಿಯಾ ಮಸೀದಿಯ ಕಾಪೌಂಡ್ ನಿರ್ಮಾಣೆಕ್ಕೆಂದು ತಲಾ ಒಂದು ಲಕ್ಷ ರು.ಗಳನ್ನು ಬಿಡುಗಡೆ ಮಾಡಿದೆ ಎಂದು ಮುಸ್ಲಿಂ ಮುಖಂಡ ರಫೀಕ್ ಅಹಮದ್ ತಿಳಿಸಿದ್ದಾರೆ. ಸದ್ಯ ಹಣ ಬಿಡುಗಡೆಯಾಗಿರುವ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ವಕ್ಫ್ ಮಂಡಲಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.  ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಶ್ರೇಯೋಭಿವೃದ್ಧಿಗೆ ಪಣತೊಟ್ಟಿದ್ದು ಏಕಕಾಲದಲ್ಲಿ ತಾಲ್ಲೂಕಿನ 7 ಮಸೀದಿಗಳ ಜೀರ್ಣೋಧ್ಧಾರ ನಿರ್ಮಾಣ ಕ್ಕೆ ಮುಂದಾಗಿರುವುದಕ್ಕೆ ರಫೀಕ್ ಅಹಮದ್ ಅಭಿನಂದಿಸಿದ್ದಾರೆ.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಚ್.ಹನುಮಂತಯ್ಯ, ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ನಂಜುಂಡಯ್ಯ ಹಾಗೂ ಪಟ್ಟಣ ಪಂಚಾಯ್ತಿಯ ಸದಸ್ಯ ಎಚ್.ಮಹೇಶ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಮುಸ್ಲಿಂ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಪ್ ಖಾತೆ ಸಚಿವ ಖಮರುಲ್ಲಾ ಇಸ್ಲಾಂ, ವಕ್ಪ್ ಮಂಡಲಿ ಅಧ್ಯಕ್ಷ ಜಹೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ತುಮಕೂರು ಶಾಸಕ ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ರವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement