ವೈಭವದ ಕರಿಯಮ್ಮದೇವಿ ಮುಳ್ಳುಗದ್ದಿಗೆ ಉತ್ಸವ
ತಿಪಟೂರು: ನಾಡಿನ ಶಕ್ತಿ ದೇವತೆಗಳಲ್ಲಿ ಒಂದಾದ ತಾಲೂಕಿನ ಕಸಬಾ ಹೋಬಳಿ ಮಾರುಗೊಂಡನಹಳ್ಳಿ ಕರಿಯಮ್ಮದೇವಿ ಮುಳ್ಳುಗದ್ದಿಗೆ ಉತ್ಸವ ಸುಮಾರು ನಾಲ್ಕೈದು ಅಡಿ ಎತ್ತರದ ಗಟ್ಟಿ ಕಾರೆಮುಳ್ಳಿನ ರಾಶಿಯ ಮೇಲೆ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ಯಶಸ್ವಿಯಾಗಿ ನಡೆಯಿತು. ಪ್ರತಿವರ್ಷ ಕಾರ್ತೀಕ ಮಹೋತ್ಸವ ಮತ್ತು ಜಾತ್ರೆ ಆಚರಿಸುವ ಈ ಸಂದರ್ಭದಲ್ಲಿ ಮುಳ್ಳುಗದ್ದಿಗೆ ಉತ್ಸವ ಹಮ್ಮಿಕೊಳ್ಳುವುದು ಇಲ್ಲಿಯ ವಿಶೇಷ. ಈ ಉತ್ಸವಕ್ಕೆ ನಾಡಿನಾದ್ಯಂತ ಸಾವಿರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.