ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 5 Dec 2013, 11:23 am

ಆಹಾರ ಧಾನ್ಯ ಖರೀದಿಗೆ ಸಂಗ್ರಹಣಾ ಕೇಂದ್ರಗಳ ಸ್ಥಾಪನೆ
ತುಮಕೂರು: ತುಮಕೂರು ಜಿಲ್ಲೆಯಲ್ಲಿ 2013-14ನೇ ಸಾಲಿಗೆ ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ, ಭತ್ತ ಮತ್ತು ಮೆಕ್ಕೆಜೋಳ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ 2013-14ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವು ಈಗಾಗಲೇ ಘೋಷಿಸಿರುವಂತೆ ಪ್ರತಿ ಕ್ವಿಂಟಾಲ್‌ಗೆ ರಾಗಿ ಖರೀದಿ ದರ 1500, ಸರ್ಕಾರದ ಪ್ರೋತ್ಸಾಹ ಧನ 300 ಸೇರಿದಂತೆ ಒಟ್ಟು 1,800 ರು.ಗಳ ಬೆಂಬಲ ಬೆಲೆಯಡಿ ಖರೀದಿಸಲಾಗುವುದು.ಬಿಳಿ ಜೋಳ ಖರೀದಿ ದರ 1520, ಪ್ರೋತ್ಸಾಹ ಧನ 280 ಸೇರಿ,1,800 ಬೆಂಬಲ ಬೆಲೆ, ಮೆಕ್ಕೆಜೋಳ 1310  ಖರೀದಿ ದರ, ಭತ್ತ ಸಾಮಾನ್ಯ 131 ಖರೀದಿ ದರ, ಪ್ರೋತ್ಸಾಹ ಧನ 290 ಸೇರಿ 1600 ರು. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರವು ಘೋಷಿಸಿರುವಂತೆ ಮೇಲ್ಕಂಡ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಂಗ್ರಹಿಸಲು ಬದ್ಧವಾಗಿದ್ದು, ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ. ತುಮಕೂರು, ಕುಣಿಗಲ್, ಗುಬ್ಬಿ, ತಿಪಟೂರು, ಚಿ.ನಾ.ಹಳ್ಳಿ, ಹುಳಿಯಾರ್, ತುರುವೇಕೆರೆ ತಾಲೂಕುಗಳಲ್ಲಿನ ಎ.ಪಿ.ಎಂ.ಸಿ. ಯಾರ್ಡ್‌ಗಳಲ್ಲಿ ಮತ್ತು ಕೊರಟಗೆರೆ ಕೆ.ಎಫ್.ಸಿ.ಎಸ್.ಸಿ. ಆವರಣ, ಮಧುಗಿರಿ ಎ.ಪಿ.ಎಂ.ಸಿ. ಆವರಣದಲ್ಲಿ ಕ್ರಮವಾಗಿ ರಾಗಿ, ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾನಗಳನ್ನು ತೆರೆಯಲಾಗಿದ್ದು,  ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಜಿಲ್ಲೆಯಲ್ಲಿ ಸಂಗ್ರಹಣಾ ಏಜೆನ್ಸಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.  
ತೆಂಗಿನಕಾಯಿ ಕೀಳಲು ಹೋಗಿ ಸಾವು
ಶಿರಾ: ತೆಂಗಿನಕಾಯಿಯನ್ನು ಕೀಳಲು ಹೋಗಿ ಆಕಸ್ಮಿಕವಾಗಿ ವ್ಯಕ್ತಿಯೊಬ್ಬ ಬಿದ್ದು ಮರಣ ಹೊಂದಿರುವ ಘಟನೆ ತಾಲೂಕಿನ ಯರಗುಂಟೆ ಕಾಲೋನಿಯಲ್ಲಿ ನಡೆದಿದೆ. ಮೃತ ವ್ಯಕ್ತಿ ಮಾಗೋಡು ಗ್ರಾಮದ ಹನುಮಂತರಾಯಪ್ಪ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸರು ಕೇಸು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ರಸ್ತೆ ಅಗಲೀಕರಣ ವಿರೋಧಿಸಿ
ವಿಷ ಸೇವಿಸಿದ ರೈತ
ಶಿರಾ: ರಸ್ತೆ ಅಗಲೀಕರಣ ಮಾಡಬಾರದು ಎಂದು ವಿರೋಧಿಸಿ ರೈತನೊಬ್ಬ ವಿಷ ಸೇವಿಸಿದ ಘಟನೆ ತಾಲೂಕಿನ ಗಡಿ ಗ್ರಾಮ ಚಿರತಹಳ್ಳಿಯಲ್ಲಿ ನಡೆದಿದೆ. ಚಿರತಹಳ್ಳಿ ಗ್ರಾಮದ ಹನುಮಂತನಗರ ಬಡಾವಣೆಗೆ ಸರ್ಕಾರದ ವತಿಯಿಂದ ರಸ್ತೆ ನಿರ್ಮಾಣಕ್ಕೆ ಹಣ ಬಂದಿದ್ದು, ಈ ರಸ್ತೆ ತನ್ನ ಜಮೀನಿನಲ್ಲಿ ಹೋಗುತ್ತದೆ ಎಂದು ತಿಳಿದು ಇದನ್ನು ವಿರೋಧಿಸಿ ವಿಷ ಸೇವಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement