ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಂಬೇಡ್ಕರ್ ಆದರ್ಶ ಪಾಲನೆಯಾಗಲಿ: ಚೌಧರಿ

Rashmi Kasaragodu
Updated On : 7 Dec 2013, 12:23 pm

ಪಾವಗಡ: ಮಾನವತಾವಾದಿ ಅಂಬೇಡ್ಕರ್  ಅವರ ಆದರ್ಶ ಮತ್ತು ವಿಚಾರಗಳು ಎಲ್ಲರಿಗೂ ಆದರ್ಶವಾಗಬೇಕು ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ವೈ.ಆರ್. ಚೌಧರಿ ಅಭಿಪ್ರಾಯಪಟ್ಟರು.
ಅಂಬೇಡ್ಕರ್ 57ನೇ ಮಹಾ ಪರಿನಿರ್ವಾಹಣ ದಿನದ ಹಿನ್ನಲೆಯಲ್ಲಿ ಸೋಮವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಆನೇಕ ಹೋರಾಟಗಳ ಮೂಲಕ ಈ ದೇಶಕ್ಕೆ ಬಹುದೊಡ್ಡ  ಕೊಡುಗೆ ನೀಡಿದ್ದಾರೆ. ಜೊತೆಗೆ ಉತ್ತಮ ಸಂವಿಧಾನ ಕಲ್ಪಿಸುವ ಮೂಲಕ ಸರ್ವರಿಗೂ ಸಮಾನತೆ ಕಲ್ಪಿಸಿದ್ದಾರೆ.
ಬಾಲ್ಯ ಜೀವನ ಸೇರಿದಂತೆ ವಿದ್ಯಾರ್ಥಿ ದಿಸೆಯಲ್ಲಿ ಅವರು ಅನುಭವಿಸಿದ ನೋವು ಮತ್ತು ಆ ದಿನಗಳಲ್ಲಿ ವಿದೇಶಿ ವ್ಯಾಸಂಗ ಮತ್ತು ಅವರು ಪಡೆದ ಉನ್ನತ ಪದವಿಗಳ ಬಗ್ಗೆ ವಿವರಿಸಿದರು.
ದಸಂಸ ರಾಜ್ಯ ಸಂಚಾಲಕ ಭರತ್‌ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ದಸಂಸ ಸಂಚಾಲಕ ಕೃಷ್ಣಮೂರ್ತಿ ಕೊತ್ತೂರು ಜಯರಾಮ್, ದೇವಲಕೆರೆ ಕೆ.ಪಿ.ಈರಣ್ಣ, ಪಾಂಡು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕಾಧಿಕಾರಿ ಮಲ್ಲಿಕಾರ್ಜುನ,ನಿಲಯ ಪಾಲಕರಾದ ಶಿವಪ್ಪ, ರಾಜ್‌ಕುಮಾರ್, ಹನುಮಂತರಾಯಪ್ಪ, ಲೆಕ್ಕ ಪರಿಶೋಧಕ ವೆಂಕಟೇಶಪ್ಪ, ವೇಣು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement