'ಅಂಬೇಡ್ಕರ್ ಚಿಂತನೆ ಅನುಷ್ಠಾನವಾಗುತ್ತಿಲ್ಲ'
ಶಿರಾ: ಡಾ.ಅಂಬೇಡ್ಕರ್ ಚಿಂತನೆ ಸಂವಿಧಾನದಲ್ಲಿದ್ದರೂ, ಆಳುವ ವರ್ಗ ಮಾತ್ರ ಅದನ್ನು ಜಾರಿಗೆ ತರದೆ ಇರುವುದು ವಿಷಾದಕರ ಸಂಗತಿ ಎಂದು ಕಸಾಪ ಮಾಜಿ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಎಸ್ಪಿ ಮುಖಂಡ ಜಿ.ಎನ್.ರಾಜಸಿಂಹ ಮಾತನಾಡಿ, ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ರಾಷ್ಟ್ರೀಯತೆ. ವಿಶ್ವ ಭ್ರಾತೃತ್ವ, ಸಮಾನತೆ ಹಾಗೂ ಮಾನವ ಜೀವಿಗೆ ಬೇಕಾಗುವ ಎಲ್ಲಾ ಒಳಿತು ಸೇರಿವೆ ಎಂದರು. ತಾಲೂಕು ದಸಂಸ ಸಂಚಾಲಕ ರಂಗನಾಥ್ ಮತ್ತಿತರರು ಮಾತನಾಡಿದರು. ದಸಂಸ ಮುಖಂಡರಾದ ಕೆ.ವಿಶ್ವನಾಥ್, ಬೀರನಹಳ್ಳಿ ಹನುಮಂತರಾಯಪ್ಪ, ಗುಳಿಗೇನಹಳ್ಳಿ ನಾಗರಾಜು, ಬಿ.ಎಸ್.ಪಿ. ಜಿಲ್ಲಾ ಕಾರ್ಯದರ್ಶಿ ಹುಣಸೆಕಟ್ಟೆ ನಾಗರಾಜು, ಮಾದಿಗ ದಂಡೋರ ರಾಜ್ಯ ಕಾರ್ಯಾಧ್ಯಕ್ಷ ಮಾಗೋಡು ಭೂತರಾಜು, ಮಾಜಿ ನಗರಸಭಾ ಸದಸ್ಯ ಕೆ.ಮಂಜುನಾಥ್, ರಾಜು, ಕಾರೇಹಳ್ಳಿ ರಂಗನಾಥ್, ಗಿರಿಯಪ್ಪ, ಶಿವು, ಮತ್ತಿತರರು ಉಪಸ್ಥಿತರಿದ್ದರು.