ಅಪಘಾತ: ವ್ಯಕ್ತಿ ಸಾವು
ಕೊರಟಗೆರೆ: ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೋನಿಗರ ಹಳ್ಳಿಯ ಬಳಿ ನಡೆದಿದೆ. ಶಂಕರ(22)ಮೃತ ದುರ್ದೈವಿ. ಜೋನಿಗಹಳ್ಳಿಯಿಂದ ಬರುತ್ತಿದ್ದ ದ್ವಿಚಕ್ರ ಮತ್ತು ತೋವಿನಕೆರೆ ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಅಪಘಾತ ನಡೆದಿದ್ದು ದ್ವಿಚಕ್ರ ವಾಹನದ ಹಿಂಬದಿ ಸವಾರನಿಗೆ ಕಾಲು ಮುರಿದಿದ್ದು ಟ್ರಾಕ್ಟರ್ ಚಾಲಕನ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.