ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಪಂ ನೂತನ ಅಧ್ಯಕ್ಷರ ಆಯ್ಕೆ

Rashmi Kasaragodu
Updated On : 7 Dec 2013, 12:23 pm

ಕುಣಿಗಲ್: ಸಂತೇ ಮಾವತ್ತೂರು ಗ್ರಾಪಂ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಹಲವು ಕ್ರಮಗಳ ಹೊರತಾಗಿಯೂ ಕುಡಿವ ನೀರಿಗೆ ತೊಂದರೆ ಇದ್ದು, ಈ ನಿಟ್ಟಿನಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಿ, ಸಮಸ್ಯೆ ನಿವಾರಣೆಗೆ ಶ್ರಮಿಸುವುದಾಗಿ ನೂತನ ಗ್ರಾಪಂ ಅಧ್ಯಕ್ಷ ಸಿಂಗ್ರಿಗೌಡ ತಿಳಿಸಿದರು.
ಶುಕ್ರವಾರ ನಡೆದ ಸಂತೇಮಾವತ್ತೂರು ಗ್ರಾಪಂ ಅಧ್ಯಕ್ಷರ ಅಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಂತರ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ನರೇಗ ಸೇರಿದಂತೆ ಸಾಕಷ್ಟು ಯೋಜನೆಗಳ ಮೂಲಕ ಅನುದಾನ ನೀಡುತ್ತಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ತಾಲೂಕಿಗೆ ಮಾದರಿ ಗ್ರಾಪಂ   ಮಾಡಲು ಶ್ರಮಿಸುವ ಭರವಸೆ ನೀಡಿದರು.ತಹಸೀಲ್ದಾರ್ ಪುಟ್ಟನರಸಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷರನ್ನು ಮುಖಂಡರಾದ ರಾಜು, ರವಿ, ಅರುಣ್‌ಕುಮಾರ್, ಮಾಗಡಯ್ಯ, ಜಯಕರ್ನಾಟಕ ಅಧ್ಯಕ್ಷ ಅಪ್ಪುಸುರೇಶ್, ಶ್ರೀಕಂಠಯ್ಯ ರಂಗಸ್ವಾಮಿ ಮತ್ತಿತರರು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement