ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಡೆದಾಡುವ ಕ್ಯಾಲೆಂಡರ್ ಶಿವಕುಮಾರ್‌ಗೆ ಪ್ರಶಸ್ತಿ

Rashmi Kasaragodu
Updated On : 7 Dec 2013, 12:24 pm

ತುಮಕೂರು: ಕೋಟ್ಯಂತರ ವರ್ಷಗಳ ವಾರ ತಿಳಿಯುವ ಕ್ಯಾಲೆಂಡರ್ ರೂಪಿಸಿರುವ ತುಮಕೂರಿನ ಶಿವಕುಮಾರ್ ಇಂಗ್ಲೆಡ್ ಮೂಲದ ರೆಕಾರ್ಡ್ ಹೋಲ್ಡ್‌ರೆಸ್ ರಿಪಬ್ಲಿಕ್ ದಾಖಲೆಗೆ ಪಾತ್ರರಾಗಿದ್ದಾರೆ.
ಶೂನ್ಯದಿಂದ ಅಂತ್ಯವಿಲ್ಲದ ವರ್ಷಗಳವರೆಗಿನ ವಾರ ತಿಳಿಯುವ ಕ್ಯಾಲೆಂಡರ್ ಅನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಈ ಸಂಬಂಧ ತಮಗೆ ದೊರೆತಿರುವ ಶೀಲ್ಡ್ ಮತ್ತು ಪ್ರಮಾಣ ಪತ್ರವನ್ನು ಶಿವಕುಮಾರ್ ಪ್ರದರ್ಶಿಸಿದರು.
ಇದಲ್ಲದೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರವೂ ತಮಗೆ ದೊರೆಯಲಿದ್ದು, ಲಿಮ್ಕಾ ಹಾಗೂ ಗಿನ್ನಿಸ್ ರೆಕಾರ್ಡ್ ಸಂಸ್ಥೆಯವರು ಕ್ಯಾಲೆಂಡರ್ ಅನ್ನು ದಾಖಲೆಯಾಗಿ ಪರಿಗಣಿಸಿದ ಪುರಸ್ಕರಿಸುವ  ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಶಿವಕುಮಾರ್ ನಿವೃತ್ತಿ ನಂತರ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ನಿಶ್ಚಿಯಿಸಿದಾಗ ಅವರಿಗೆ ಕ್ಯಾಲೆಂಡರ್ ಅನ್ವೇಷಿಸುವ ಆಲೋಚನೆ ಬಂತು.
ಕೇವಲ ಎ4 ಸೈಜಿನ ಹಾಳೆಯಲ್ಲೇ ಕೋಟ್ಯಂತರ ವರ್ಷದ ಕ್ಯಾಲೆಂಡರ್ ರೂಪಿಸಲಾಗಿದೆ ಎಂದ ಅವರು ಜನರು ತಮಗೆ ಪ್ರೀತಿಯಿಂದ ನಡೆದಾಡುವ ಕ್ಯಾಲೆಂಡರ್ ಎಂದು ಬಿರುದು ಕೊಟ್ಟಿದ್ದಾರೆ ಎಂದರು. ಎಷ್ಟೋ ಜನರಿಗೆ ಹುಟ್ಟಿದ ದಿನಾಂಕ ಗೊತ್ತಿರುತ್ತೆ. ಆದರೆ ವಾರ ತಿಳಿದಿರುವುದಿಲ್ಲ. ಆದಕಾರಣ ವಾರವನ್ನು  ಕಂಡುಹಿಡಿಯುವ ಕೆಲಸಕ್ಕೆ ಕೈ ಹಾಕಿದೆ ಎಂದರು.
ಸಾಮಾಜಿಕ ಸೇವೆಯ ಭಾಗವಾಗಿ ತಾವೂ ಉಚಿತವಾಗಿ ವಾರ ತಿಳಿಯುವ ಕ್ಯಾಲೆಂಡರ್ ಪರಿಚಯಿಸುವ ಕಾರ್ಯ ಮಾಡುತ್ತಿದ್ದು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ಈ ಕ್ಯಾಲೆಂಡರ್ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿದ್ದಲ್ಲಿ  ಮೊ-98444-14939 ಸಂಪರ್ಕಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement