ಬಿಎಚ್‌ಡಬ್ಲ್ಯೂ ಸಾಧನೆ ಬದುಕು ಪ್ರಶಸ್ತಿ ಪ್ರದಾನ
ತಿಪಟೂರು: ನಗರದ ಬಿಎಚ್‌ಡಬ್ಲ್ಯೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹಾಗೂ ಪರಿಸರ ಸಂರಕ್ಷಣೆ ಅಭಿವೃದ್ಧಿ ವಿಭಾಗದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸಿ.ಕೆ.ಕಪ್ಪಣ್ಣನವರ ಜ್ಞಾಪಕಾರ್ಥವಾಗಿ 2013-14ನೇ ಸಾಲಿನ ಬಿ.ಎಚ್.ಡಬ್ಲ್ಯೂ ಸಾಧನೆಯ ಬದುಕು ಪ್ರಶಸ್ತಿಯನ್ನು ತಿಪಟೂರಿನ ಸಮಾಜ ಸೇವಕ ಮೂರ್ತಿಯವರಿಗೆ ನೀಡಲಾಯಿತು.
ಮೂರ್ತಿಯವರು ಯಾವುದೇ ಸಂಬಳ ಅಥವಾ ಆರ್ಥಿಕ ಫಲಾಪೇಕ್ಷೆ ಇಲ್ಲದೇ ತಿಪಟೂರು ಅಮಾನಿಕೆರೆಯ ನಿರ್ವಹಣೆ ಹಾಗೂ ಕೆರೆ ಆವರಣದಲ್ಲಿರುವ ಸಸ್ಯ ಸಂಕುಲಗಳ ರಕ್ಷಣೆಯ ಕೆಲಸದಲ್ಲಿ ಕಳೆದ ಮೂರು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುನ್ನು ಮನಗಂಡು ಈ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗದೆ ಎಂದು ಸಂಸ್ಥೆತಿಳಿಸಿದೆ.
ಈ ಸಂದರ್ಭದಲ್ಲಿ ಸಂಸ್ಥೆ ಏರ್ಪಡಿಸಿದ್ದ ಸ್ಟಾರ್ ಆಫ್ ತಿಪಟೂರು ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರತಿಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.