ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೈನುಗಾರಿಕೆ ಪ್ರಗತಿಗೆ ಅಗತ್ಯ ಬೆಂಬಲ: ಡಿ.ಕೃಷ್ಣಕುಮಾರ್

Rashmi Kasaragodu
Updated On : 7 Dec 2013, 12:23 pm

ಕುಣಿಗಲ್: ಹೈನುಗಾರಿಕೆಗೆ ಸರ್ಕಾರ ಹಾಗೂ ಹಾಲು ಒಕ್ಕೂಟವು ಹಲವು ಉತ್ತಮ ಪ್ರೋತ್ಸಾಹದಾಯಕ ಯೋಜನೆ ನೀಡುತ್ತಿದ್ದು, ರೈತರು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು   ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್ ಕಿವಿಮಾತು ಹೇಳಿದರು.
ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ  ತುಮಕೂರು ಹಾಲು ಒಕ್ಕೂಟ ಆರಂಭಿಸಿದ ನಂದಿನಿ ಮಿಲ್ಕ್ ಬೂತ್ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ರಂಗದಲ್ಲೂ ಪೈಪೋಟಿ ಹೆಚ್ಚಾಗುತ್ತಿದ್ದು, ಹೈನುಗಾರರ ಹಿತರಕ್ಷಣೆ ಉದ್ದೇಶದಿಂದ ಸ್ಥಾಪಿತವಾಗಿರುವ ಹಾಲು ಒಕ್ಕೂಟ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪೂರೈಸುತ್ತಿವೆ. ದುರಂತ ಎಂದರೆ, ಕೆಲ ಖಾಸಗಿ ಹಾಲು ಪೂರೈಕೆದಾರರು ಕಳಪೆ ಗುಣಟ್ಟದ, ಕಲಬೆರೆಕೆ ಹಾಲನ್ನು ಪೂರೈಕೆ ಮಾಡುತ್ತಿದ್ದು,  ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ  ಎಂದರು.
ತಹಸೀಲ್ದಾರ್ ಪುಟ್ಟನರಸಯ್ಯ ಮಾತನಾಡಿ, ಹಾಲು ಸಹಕಾರಿ ಮಹಾಮಂಡಳದ ವಿವಿಧ ಒಕ್ಕೂಟಗಳು ಪೂರೈಸುವ ವಿವಿಧ ಬ್ರಾಂಡ್‌ನ ಉತ್ತಮ ಗುಣಟ್ಟದ ಹಾಲನ್ನೇ ಸಾರ್ವಜನಿಕರು ಹೆಚ್ಚು-ಹೆಚ್ಚು ಉಪಯೋಗಿಸುವ ಮೂಲಕ ಅವರ ಆರೋಗ್ಯ ಕಾಪಾಡುವುದರ ಜೊತೆಯಲ್ಲಿ, ಲಕ್ಷಾಂತರ ಹೈನುಗಾರರಿಗೆ  ಬೆಂಬಲಿಸಿ, ಅ ವರಿಗೂ ಪರೋಕ್ಷವಾಗಿ ಸಹಕಾರ ನೀಡದಂತಾಗುವುದೆಂದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ನಡೇಮಾವಿನಪುರ ರಂಗಸ್ವಾಮಿ, ಪುರಸಭೆ ಸದಸ್ಯ ರಂಗಸ್ವಾಮಿ,ಮಾರುಕಟ್ಟೆ ವ್ಯವಸ್ಥಾಪಕ ಶ್ರೀನಿವಾಸ್, ಸಹಾಯಕ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement