ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಖ್ಯಾತ ಸುಲಿಗೆಕೋರರ ಬಂಧನ

Rashmi Kasaragodu
Updated On : 8 Dec 2013, 12:57 pm

ತುಮಕೂರು: ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಕಡೆ ದರೋಡೆ ನಡೆಸುತ್ತಿದ್ದ ಕುಖ್ಯಾತ ಸುಲಿಗೆಕೋರರನ್ನು ಬಂಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿದ್ದಲಿಂಗಪ್ಪ ಅಲಿಯಾಸ್ ಸಿದ್ದ, ಎನ್. ನಾಗರಾಜ ಅಲಿಯಾಸ್, ಪ್ರತಾಪ ಅಲಿಯಾಸ್ ಕ್ಯಾಟಿ ಬಂಧಿತ ಆರೋಪಿಗಳು.
ಕಳೆದ 19 ರಂದು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕೋರ ಹತ್ತಿರ ಬೆಂಗಳೂರಿಗೆ ಹೋಗಿ ಬಾಳೆಕಾಯಿ ಮಾರಾಟ ಮಾಡಿ, ಸುನೀಲ್ ಮತ್ತು ಕ್ಲೀನರ್ ಟಾಟಾ ಏಸ್ ವಾಹನದಲ್ಲಿ ಚಿತ್ರದುರ್ಗಕ್ಕೆ ವಾಪಸು ಬರುತ್ತಿದ್ದಾಗ ಬೆಂಗಳೂರಿನಿಂದ ವಾಹನದಲ್ಲಿ ಹಿಂಬಾಲಿಸಿ 3 ಜನ ಆರೋಪಿಗಳು ಟಾಟಾ ಏಸ್ ವಾಹನದಲ್ಲಿದ್ದವರನ್ನು ತಡೆದು, ಹಲ್ಲೆ ನಡೆಸಿ ಅವರಿಂದ 19 ಸಾವಿರ ಹಣ ಮತ್ತು 2 ಮೊಬೈಲ್ ದೋಚಿದ್ದರು ಬಗ್ಗೆ ಕೋರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ತುಮಕೂರು ಗ್ರಾಮಾಂತರ ವೃತ್ತದ ಸಿಪಿಐ ಪಿ. ರವಿ, ಕೋರ ಠಾಣೆ ಪಿಎಸ್ಐ ಅವಿನಾಶ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಸಿದ್ದಲಿಂಗಪ್ಪ ಎಂಬುವವನ್ನು ನೆಲಮಂಗಲ ಜಾಸ್ ಟೋಲ್ ಹತ್ತಿರ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿ ಈತನು ಕೊಟ್ಟ ಮಾಹಿತಿ ಮೇರೆಗೆ ಕೋರ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
ಈ ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಅಂಶ ಹೊರಬಿದ್ದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement