ಗೆಲವು ಖಚಿತ: ಸೊಗಡು
ತುಮಕೂರು: 6 ತಿಂಗಳ ಹಿಂದಿನ ಕಹಿ ನೆನಪು ಈಗಿಲ್ಲ. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಉತ್ಸಾಹದಲ್ಲಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲವು ಖಚಿತ. ಕಾರ್ಯಕರ್ತರು ಶ್ರಮವಹಿಸಿ ದುಡಿಯುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಕರೆ ನೀಡಿದರು.
ಜನವರಿಯಲ್ಲಿ ತುಮಕೂರಿಗೆ ಮೋದಿ: ಮುಂದಿನ ಜನವರಿಯಲ್ಲಿ ತುಮಕೂರಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಚೆನ್ನಾಗಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1991 ರಿಂದ ಇಲ್ಲಿಯವರೆಗೆ ಬಿಜೆಪಿ ಒಂದು ಬಾರಿ ಮಾತ್ರ ಸೋಲು ಕಂಡಿದೆ. ಹೀಗಾಗಿ ಅಭ್ಯರ್ಥಿ ಯಾರೇ ಆದರೂ ಸರಿ ಗೆಲವಿಗಾಗಿ ಶ್ರಮಿಸುವಂತೆ ರಾಜ್ಯ ಬಿಜೆಪಿ ಮುಖಂಡ ಎಂ.ಬಿ. ನಂದೀಶ್ ಕರೆ ನೀಡಿದರು.