ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇವಾಲಯದ ಹುಂಡಿ ಒಡೆದು ಕಳವು

Rashmi Kasaragodu
Updated On : 8 Dec 2013, 12:58 pm

ಕುಣಿಗಲ್: ತುಮಕೂರು ರಸ್ತೆಯಲ್ಲಿನ ಅಟವೀಶ್ವರ ಸ್ವಾಮಿ ದೇವಾಲಯದ ಹುಂಡಿ ಒಡೆದು ಕಳವು ಮಾಡಿರುವ ಘಟನೆ ನಡೆದಿದೆ,  ಮುಖ್ಯರಸ್ತೆಗೆ ಹೊಂದುಕೊಂಡಂತೆ ಮಹಾವೀರ ನಗರ ಬಡಾವಣೆಯಲ್ಲಿರುವ ಅಟವೀಶ್ವರ ದೇವಾಲಯದ ಅರ್ಚಕ ಗಂಗಾಧರ ಎಂದಿನಂತೆ ಶನಿವಾರ ಬೆಳಗ್ಗೆ ಪೂಜೆಗಾಗಿ ಆಗಮಿಸಿದಾಗ, ದೇವಾಲಯದ ಹುಂಡಿ ಒಡೆದು ಹಣವನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಅರ್ಚಕ ಗಂಗಾಧರ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಹುಂಡಿಯಲ್ಲಿದ್ದ ಹಣದ ಮೌಲ್ಯ ಸ್ಪಷ್ಟವಾಗಿ ಲಭ್ಯವಾಗಿಲ್ಲವೆನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement